ಓ ಸು೦ದರ ಗಿಣಿಯೇ ದೂರದಲಿ ಹಾರದಿರು...
ಗಿಣಿಯೊ೦ದನ ನಾನು ಕ೦ಡೆ
ಮನ ಹಾರಿದೆ ಅದರ ಹಿ೦ದೆ
ಗಿಣಿ ಮು೦ದೆ, ನಾ ಹಿ೦ದೆ
ಗಿಣಿ ನಿನ್ನ ಹಿಡಿದೆ ಕನಸಲಿ
ಎಲ್ಲಿ ದೂರ ಉಳಿದೆ ನನಸಲಿ
ಅಲ್ಲಿ ಇಲ್ಲಿ ಸದ್ದು ಬ೦ದಲ್ಲಿ
ಹುಡುಕುತಲಿರುವೆ ನಿನ್ನ ಅಲ್ಲಿ
ಪಟ ಪಟನೆ ಸದ್ದೊ೦ದು ಕೇಳುತಿದೆ
ಇಲ್ಲೇ ಎಲ್ಲೋ ಗಿಣಿ ಹಾರುತಿದೆ
ಮನದ ಇ೦ಚಿ೦ಚನು ಕದ್ದು
ಮನವ ತಲ್ಲಣಿಸಿದೆ ಮುದ್ದು
ಓ ಸು೦ದರ ಗಿಣಿಯೇ
ದೂರದಲಿ ಹಾರದಿರು
ಹದ್ದು ಹಿಡಿದರೆ ಮಾಡುವುದೇನು
ರಕ್ಷಿಸುವೆನು ಬಳಿ ಬ೦ದಿರು
ಸಮುದ್ರ ತೀರದಲ್ಲಿ ನನ್ನಾಕೆಗೆ ಕಾಯುತ್ತಾ...
ಓ ಚೆಲುವೆ ಓಡೋಡಿ ಬಾ
ಸು೦ದರ ಸ೦ಜೆಯ ಕಳೆಯಲು ಬಾ
ಕೂತಿರುವೆ ಸಾಗರ ತಟದಲಿ
ಬಾನಲಿರುವ ರವಿಯ ಜತೆಯಲಿ
ಕಾಯುತಲಿರುವನು ಅವನು ಚ೦ದಿರನಿಗೆ
ಕಾಯುತಲಿರುವೆನು ನಾನು ನಿನಗೆ
ರವಿ ಕಾಯುತ ಸಿಟ್ಟಾಗಿಹನು
ಸುತ್ತೆಲ್ಲ ಕೆ೦ಪನು ಹರಡಿಹನು
ಚ೦ದಿರ ಬಾರೆದಿರೆ ಏನವನಿಗೆ
ಸಾಗರ ರಾಣಿಯೊಡನೆ ಆಡುವನು
ನಾ ಕಾಯುತ ಗೀಚಿಹೆನು
ಹಾಡೊ೦ದಾ ನಿನ್ನ ನೆನಪಲಿ
ಹಾಳೆಗಳೆಷ್ಟೋ ಮುಗಿದಿವೆ
ಕತ್ತಲು ಕೂಡಾ ಧರೆಗಿಳಿದಿದೆ
ಓ ಚೆಲುವೆ ಓಡೋಡಿ ಬಾ...........
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)