ಯಾರೋ ನೆಟ್ಟರು, ಯಾರೂ ಮುಟ್ಟರು

ಯಾರೋ ಮಣ್ಣಾಗಿ ನನ್ನ ಬೆಳೆಸಿದರು

ಎಲ್ಲಿಂದಲೊ ಹರಿದು ಬಂದು ನನಗೊದಗುವದು ನೀರು

ಆದರೂ ಕೊರಗುತ್ತಿರುವೆ ನನಗೆ ಜನ್ಮ ಕೊಟ್ಟವರಾರು?

ನನಗೆ ಜನ್ಮಕೊಟ್ಟವರಾರು?

 

ಗಾಳಿ ಬೀಸಿದಾಗಲೆಲ್ಲ ಬಾಗಿ ಬೀಗುವೆ

ನಾನು ಸ್ವತಂತ್ರ ಜೀವಿ, ನನಗ್ಯಾವ‌ ಸಂಬಂಧದ‌ ಬಂಧನವಿಲ್ಲ.

ಆದರೂ ನೋಯುವೆ, ಪುಟ್ಟನಿಗೆ ಹಣ್ಣು ಎಟುಕಲಿಲ್ಲವೆಂದು,

ನೆರಳಾಗೀ ಕಾಯುವೆ ಮನುಜನಿಗೆ ಬಿಸಿಲು ತಾಕದಿರಲೆಂದು.

 

ಪುಟ್ಟ ಬೀಜವಾಗಿ, ಮೊಳಕೆಯೊಡೆದು, ಸಸಿಯಾಗಿ ಬೆಳೆದು,

ಹೆಮ್ಮರವಾಗಿರುವೆ.ನಾನಿಂದು ವಿಶಾಲ‌ ಹ್ರುದಯಿ.

ಒಪ್ಪಿಕೊಂಡು ಬಿಡುವೆ ವಿಶ್ವವೇ ನನ್ನ ಬಳಗವೆಂದು.

ಆದರೆ ನನ್ನ ಕೊರಗೊಂದೇ, ನನ್ನಂತೆಯೇ

ಈ ರಸ್ತೆಯೂ ನನ್ನನ್ನು ಒಪ್ಪಿಕೊಳ್ಳಲಿಲ್ಲವಲ್ಲ ತನ್ನ ಬಂಧುವೆಂದು!!

 

ದಿನಕ್ಕಾಗಿ ಕಾದರು, ಚಣಕ್ಕಾಗಿ ಕಾದರು

ಕಾದಾಡಿ ನನ್ನನ್ನು ನೆಲಕ್ಕುರುಳಿಸಿದರು.

ಆದರೆ ಪುಟ್ಟ ಬೀಜವೊಂದನ್ನು ಸಿಮೆಂಟಿನ‌ ಮಧ್ಯೆ ಬಚ್ಚಿಟ್ಟಿದ್ದಾರೆ.

ಅದರೊಳಗಿನಿಂದಲೇ ಮೊಳಕೆಯೊಡೆದು ಮತ್ತೆ ಬೆಳೆಯುವ‌ ಆಸೆ ನನಗೆ!!.