ವಿದಾಯ ಹೇಳು ಮನವೇ
ಇನ್ನೊಂದು ಬದುಕು ಆರಿಸುವ ಕಾತರ ||
ವಿಶೇಷವು ಲವಲೇಶವು
ಇರದ ಈ ಭುವಿಯಲಿ
ಮತ್ತೇಕೆ ಭಯ ಪಡುವೆ ಓ ಮೌನಿಗ
ವಿದಾಯ ಹೇಳು ಮನವೇ ||
ಸರಿ ದೂರ ನಡೆದು
ಮಧ್ಯ ಇಲ್ಲೇಕೆ ನಿಂತೆ
ನೀ ದಣಿವಾರಿಸಿಕೊ ಓ ಅಲೆಮಾರಿಗ
ವಿದಾಯ ಹೇಳು ಮನವೇ ||
ಅತೀವ ದುಃಖ ಉಮ್ಮಳಿಸಿ
ಈ ಹೃದಯ ಕಣ್ಣೀರ ಹೊರಹಾಕಿದೆ,
ಅನೇಕ ನೋವು ಉಳಿಸಿ ಈ ಜೀವ
ಇನ್ನಷ್ಸ್ಟು ನೊಂದಿದೆ.
ವಿದಾಯ ಹೇಳು ಮನವೇ ||
ಈ ಇರುಳು ಕಳೆಯುವ ಮುನ್ನ
ಮತ್ತೇಕೆ ಹುಡುಕುವೆ
ಆ ಮುಂಜಾವಿಗೆ ಓ ನಾವಿಕ,
ವಿದಾಯ ಹೇಳು ಮನವೇ ||
ಈ ಬೆಟ್ಟ ದೂರ ದೂರ
ಇನ್ನೆಷ್ಟು ದೂರ ನಡೆವೆ,
ಬರೀ ನೋವಿನ ಈ
ಛಾಯೆಯು ನಿಲಬಾರದೆ ನಿರಂತರ.
ವಿದಾಯ ಹೇಳು ಮನವೇ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!