1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ, ಕರಿಬೇವು ಹಾಕಿ.
2. ಈ ಒಗ್ಗರಣೆಗೆ ದೊಡ್ಡ ಹೋಳುಗಳಾಗಿ ಹೆಚ್ಚಿದ ಟೊಮ್ಯಾಟೋ ಕಾಯಿಗಳನ್ನು ಹಾಕಿ, ಸ್ವಲ್ಪವೇ ನೀರು ಹಾಕಿ , ಉಪ್ಪು, ಬೆಲ್ಲ ಸೇರಿಸೆ ಒಂದು ಕುದಿ ಬರುವವರೆಗೆ ಬೇಯಿಸಿ. ಇದನ್ನು ತುಂಬ ಬೇಯಿಸಬಾರದು.
3. ಉದ್ದಿನ ಬೇಳೆ, ಮೆಣಸು, ಇಂಗು, ಒಣ ಮೆಣಸಿನ ಕಾಯಿ ಮತ್ತು ತೆಂಗಿನ ತುರಿಯನ್ನು ಎಣ್ಣೆಯಲ್ಲಿ ಹುರಿದುಕೊಂಡು ಅರಿಷಿನ ಪುಡಿಯೊಂದಿಗೆ ರುಬ್ಬಿಕೊಳ್ಳಿ.
4. ತುಸು ಬೆಂದ ಟೊಮ್ಯಾಟೋಗೆ ಬೇಳೆ ಸೇರಿಸಿ ಇನ್ನೊಂದು ಕುದಿ ಬರಿಸಿ.
5. ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸೆ ಕುದಿಸಿ.(ಬೆಲ್ಲ ಕೊಂಚ ಜಾಸ್ತಿಯಿದ್ದರೆ ರುಚಿ ಹೆಚ್ಚು). ಇದನ್ನು ಬಿಸಿಯಾದ ಅನ್ನದೊಂದಿಗೆ ಸವಿಯಬಹುದು.
ಟೊಮ್ಯಾಟೋ ಕಾಯಿ ಕೂಟು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!