ತೆಳುಸಿಪ್ಪೆ ಮಾವಿನಕಾಯಿಗಳನ್ನು ಸಿಪ್ಪೆಸಹಿತ ಸಣ್ಣದಾಗಿ ಹೆಚ್ಚಿಡಬೇಕು. ದಪ್ಪತಳದ ಬಾಂಡ್ಳಿಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಈ ಒಗ್ಗರಣೆಗೆ ಮೊಳಕೆ ಬರಿಸಿದ ಮೆಂತೆಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಣ್ಣದಾಗಿ ಹೆಚ್ಚಿಟ್ಟ ಮಾವಿನ ಹೋಳು, ಬೆಲ್ಲ, ಮೆಣಸಿನ ಕಾಯಿ ಪೇಸ್ಟ್, ಉಪ್ಪು ನೀರು ಹಾಕಿ ಬೇಯಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ ಎರಡು ಚಮಚ ಸಾರಿನ ಪುಡಿ ಹಾಕಿ ಮೂರು ಕುದಿಬರಿಸಿ ಕೆಳಗಿಳಿಸಿ. ಈ ಮೊಳಕೆ ಬರಿಸಿದ ಮೆಂತೆ ಗೊಜ್ಜು ಮಾವಿನ ಕಾಯಿ ಜೊತೆ ಬೆರೆತು ವಿಶೇಷವಾದ ರುಚಿ ಕೊಡುವುದು. ಊಟ, ರೊಟ್ಟಿ, ಚಪಾತಿಗಳ ಜೊತೆ ಕೂಡ ಬಳಸಿ ಸವಿಯಬಹುದು. ಚೆನ್ನಾಗಿ ಕುದಿಸಿದರೆ ಒಂದೆರಡು ದಿನ ಕೂಡ ಇಡಬಹುದು.

-ರೋಹಿಣಿ ಶರ್ಮಾ, ಸಾಗರ