ಭಯವಾಗುತ್ತಿದೆ, ಮನದಲ್ಲೇನೊ ತಳಮಳ
ದುಗುಡ , ಹೊರಗಿನ ವಿಮಶಽಕ ಜಗತ್ತಿಗೆ
ಹೇಳಲಾಗದ ಚಿಂತೆಯೊಂದು ಕಾಡುತ್ತಿದೆ.
ತಾಯಿಯ ಉದರದಿಂದ ಹೊರಬರಬಾರದೆಂದು
ಭೂೃಣದ ಹಠ, ಹೊರಗಿನ ಸವಾಲುಗಳು,
ನಾಳೆಯ ಕಷ್ಟಗಳ ನೆನೆದು ಇಂದು ದುಃಖ ಪಡುತ್ತಿದೆ ಮನಸ್ಸು,
ಕಷ್ಟಗಳ ಮೇಲೆ ಸಂಕಷ್ಟಗಳ ಸರಮಾಲೆ,
ಒಂದರ ಮೇಲೆ ಒಂದರಂತೆ ಬಾಣಗಳಂತ ಎರಗುತ್ತಿವೆ.
ಇರುವ ಚಿಂತೆಗಳೆಷ್ಟು , ಇಲ್ಲದಿರುವ ಸೌಕಯಽಗಳೆಷ್ಟೊ,
ಬಡತನಕೆ ಕಡಿವಾಣವಿಲ್ಲ, ಆಸೆಗೆ ಮಿತಿಯಿಲ್ಲ.
ಮನಸ್ಸು ಸದಾ ಅನ್ಯಮನಸ್ಕ, ಹಿಡಿದ ಗುರಿ ಕೈಯಲ್ಲಿಲ್ಲ.
ಈ ಸಂಕಷ್ಟಗಳ ಪಯಣಕೆ ಮುಕ್ತಿ ನೀಡಲು
ಒಂದೇ ಪರಿಹಾರ
ಮನಸ್ಸು ಸವಽಸಂಗ ಪರಿತ್ಯಾಗಿ ಆಗಬೇಕು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!