ಹೃದಯ ಹೂವಂತೆ ಜಾರಿತು
ಮನದ ಕೊಳದಿ
ರೆಕ್ಕೆ ಬಿಚ್ಚಿ ಹಾರಿತು ಮನ
ಬಾನ ಅಂಗಳದಿ,
ಕಟ್ಟುವ ನಾವು ಹೊಸ ಕನಸೊಂದನು
ಈ ನಮ್ಮ ಪ್ರೀತಿಗಾಗಿ,
ಕಟ್ಟುವ ನಾವು ಹೊಸ ಗೂಡೊಂದನು
ನಾವಿಬ್ಬರು ಜೊತೆಯಾಗಿ,
ನಿನ್ನೀ ಕನಸು ಹೆಣೆಯುವ ಸೂತ್ರಕೆ
ಮೆಚ್ಚಿದೆ ನಾನು, ನೀ ಹಾಕಿದ ಪ್ರೀತಿಯ
ಬಲೆಗೆ ನಾ ಬಂಧಿಯಾದೆ ನಿನ್ನ ತೋಳಲ್ಲೆ.
ಕನಸಿನ ತೇರನು ಎಳೆಯುವ ನಾವು
ಜೊತೆಯಾಗಿ, ನಿನ್ನೀ ಕೈ ಸೋತರೆ
ಮರು ಘಳಿಗೆ ನಿನ್ನೆಲ್ಲ ನೋವನ್ನ
ನಾ ಸಹಿಸುವೆ.
ಇನ್ನು ಚಿಂತೆಯೇಕೆ ನಿನಗೆ
ಜೊತೆಯಾಗಿ ನಾನ್ನಿಲ್ಲವೇನು
ಭಯ ಬಿಡು ಏಂದೆದಿಗೂ ಸದಾ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!