ಕಳೆದು ಹೋದ ದಿನವ‌

ನೆನೆದು ಪರಿತಪಿಯುವೇ ಏಕೆ,

ಇರುವ ದಿನಗಳ ನೆನೆದು ನೀ

ಖುಷಿಪಡು ಮನವೇ.

 

ಹರಿದ ಅರಿವೆಯಿಂದ‌ 

ಮಾನ ಉಳಿದಿತೇ,

ಬಿರುವ ಬೆಂಕಿ ಬಿಸಿಲಿನಲ್ಲಿ

ಬರಿಗಾಲಲಿ ನಡೆಯಲಾದಿತೇ.

 

ಮನದ ಕೋಪ ದ್ವಿಗುಣಗೊಂಡು

ಸುಡುವ ಬೆಂಕಿಯಾಯಿತು.

ತಂಗಾಳಿಯೊಂದು ತೇಲಿ ಬಂದು

ತಣ್ನೀರ ಸುರಿಸಿ ತಂಪೆರಿಯಿತು.

 

ಎದೆಯಲ್ಲಿ ಎದ್ದ‌

ಬಿರುಗಾಳಿಯೊಂದು ಶಮನಗೊಂಡು

ಕಣ್ನೀರ್ ಸುರಿಸಿದೆ.

ಕಳೆದುಹೋದ ಕ್ಷಣವ ಮರೆತು

ಮುಂದಡಿಯ ಇಡು ನೀ

ಹಿಂತಿರುಗಿ ನೋಡದೇ ನೀ

ಹಿಂತಿರುಗಿ ನೋಡದೇ.