ನೆಲವು ನಮ್ಮದು, ಜಲವು ನಮ್ಮದು

ಪ್ರೀತಿ ನಮ್ಮದು, ಕಿರ್ತಿ ನಿಮ್ಮದು

ಗಾಳಿ ನಮ್ಮದು, ಕೂಳು ನಮ್ಮದು

ಭಾಷೆ ಏಕೆ ಬೇಕು ನಿಮ್ಮದು?

 

ಕುಡಿಯಲು ಬೇಕು ನಿಮಗೆ

ಕಾವೇರಿಯ ನೀರು

ವಾಸಿಸಲು ಬೇಕು ನಿಮಗೆ

ಕನ್ನಡಿಗರ ಸೂರು.

 

ಮರೆಯದಿರು ಗೆಳೆಯ

ಇದು ನಿನ್ನ ತವರಲ್ಲ

ನೀ ವಾಸಿಸುವ ಊರು.

ಇನ್ನೂ ತಡವೇಕೆ?

ಕಲಿತು ಏರು

ನೀ ಕನ್ನಡದ ತೇರು.

 

ಇಲ್ಲಾರಿಗೆ ಬೇಕು

ನಿನ್ನ ಎನ್ನಡ, ಎಕ್ಕಡ.

ಇಲ್ಲಿರುವವರೆಗಾದರೂ ನೀ

ಕಲಿತು ಬಾಳು, ಕನ್ನಡ ಕನ್ನಡ!

 

--ಮಂಜು ಹಿಚ್ಕಡ್

ನವೆಂಬರ್ ೧, ೨೦೧೩