ಅವಳ‌ ನೆನಪು

ಇನ್ನೂ ನನ್ನೆದೆಯ‌ ಮೆಲೆ

ಮೌನದ‌ ದೀಪದಂತೆ

ಏಕಾಂಗಿತನದ‌ ನೆಪದಂತೆ ||

 

ಕೋಟಿ ಕೋಟಿ

ತಾರೆಗಳಲಿ ಚಂದ್ರನಿರುವಂತೆ

ನನ್ನ‌ ಮನಸಲಿ

ಸದಾ ಅವಳಿರುವಳು ಎಂದಿನಂತೆ ||

 

ಅವಳ‌ ಕುಡಿನೋಟದ‌

ತುಟಿಬಿಡದ‌ ನಗುವಿನ‌

ನೈಜ‌ ಕಾರಣಕರ್ತನು

ನಾನೇ ಎಂಬುದು ಊಹೆಯಲ್ಲವೇ ||

 

ಎಂದಾದರೂ

ನನ್ನ‌ ನೆನಪಿನ‌ ರೆಕ್ಕೆ ಬಿಚ್ಚಿ

ಅವಳ‌ ಬಳಿ ಹಾರದಿರಲಿ

ಏಕೆಂದರೆ ಅವು ನನ್ನ‌ ನೆನಪುಗಳು ||

 

ನೆನಪಲೇ ನೆನೆಯುವೆ

ಅವಳ‌ ನಗುವಲಿ ನಾನಿರುವೆ

ಎಂಬ‌ ನೆಪಗಳೇ ಸಾಕಿನ್ನು

ಯಾಕೆ ನೆನಪಾದಳು ಅವಳು

ಮತ್ತೇ ಮತ್ತೇ........? ಅವಳೆಂದರೆ........?