ಕ್ರಿ.ಶ.1396 ಜನವರಿ 16 ರಂದು [ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ದಿನದಂದು ವಿಜಯ ನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜನು ತುಂಗಾ ನದೀ ದಂಡೆಯಲ್ಲಿರುವ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ವೇದಾಂತ- ತರ್ಕ-ವ್ಯಾಕರಣ ಶಾಸ್ತ್ರಗಳಲ್ಲಿ ಪರಿಣಿತನಾದ ಮಾಧವಾಧ್ವರಿ ಎಂಬ ವಿದ್ವಾಂಸನಿಗೆ " ತವನಿಧಿ"ಎಂಬ ಗ್ರಾಮವನ್ನು ಹರಿಹರಪುರ ಎಂದು ಪುನರ್ನಾಮಕರಣಮಾಡಿ ಏಳು ಉಪಗ್ರಾಮಗಳ ಸಹಿತ ದಾನ ಮಾಡಿದನು ಎಂಬ ತಾಮ್ರ ಪತ್ರ ನಮ್ಮೂರಿನಲ್ಲಿದೆ. ಅದರ ವಿವರ ಕೂಡ ಇದೆ. ಆ ವಿದ್ವಾಂಸ ಮಾಧವಾಧ್ವರಿಯ ಚಿತ್ರಕ್ಕಾಗಿ ಎಲ್ಲೆಡೆ ತಡಕಾಡಿದೆ. ಲಭ್ಯವಾಗಿಲ್ಲ. ಈ ವಿದ್ವಾಂಸನ ಚಿತ್ರವನ್ನು ಒದಗಿಸಿಕೊಡುವವರಿಗೆ ಸೂಕ್ತ ಗೌರವಗಳೊಡನೆ ಬಹುಮಾನ ನೀಡಲಾಗುವುದು. ಸಂಶೋಧನಾ ವಿದ್ಯಾರ್ಥಿಗಳು ಅಥವಾ ಆಸಕ್ತರು ಪ್ರಯತ್ನ ಪಡುವಿರಾ? ಮಾಹಿತಿ ಲಭ್ಯವಾದಲ್ಲಿ [email protected] ಗೆ ಮೇಲ್ ಮಾಡುವಿರಾ? ವಿಜಯ ನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರಮಹಾರಾಜನ ಚಿತ್ರ ಇಲ್ಲಿದೆ.

ಪ್ರತಿಕ್ರಿಯೆ (2)
ನಮ್ಮೂರಿನ ಬಗ್ಗೆ ಬರೀ ತಪ್ಪು ಮಾಹಿಯನ್ನೇ ಕೊಟ್ಟಿದ್ದಾರೆ.ಕೊಂಡಿ ನೋಡಿ.
___LINK_OPEN_href="http://hassaninfo.net/index.php?option=com_content&view=category&layout=blog&id=12&Itemid=10"___http://hassaninfo.net/index.php?option=com_content&view=category&layout=... ಸಾಕಪ್ಪಾ, ಸಾಕಪ್ಪಾ ಗೂಗಲ್ ಸಹವಾಸ ಸಾಕಪ್ಪಾ! ನಮ್ಮೂರು ನನಗೆ ಗೊತ್ತಿರುವುದರಿಂದ ಅಲ್ಲಿರುವ ಮಾಹಿತಿಗಳು ತಪ್ಪು, ಎಂದು ನನಗೆ ಗೊತ್ತು. ಬೇರೆಯವರು ಇದನ್ನೇ ಸರಿ ಅಂದುಕೊಳ್ಳುತ್ತಾರೆ.