ಅವಳೇಕೆ ಬ0ದಿಲ್ಲ
ಬ0ದ ಬಸ್ಟಾ0ಡಿನಲ್ಲೆಲ್ಲೋ,
ಅವಳ ಸುಳಿವಿಲ್ಲದ ತವಕ
ಬಿ0ಕು, ಬಿನ್ನಾಣಗಳಿಲ್ಲ
ಕೊ0ಕು ನಗೆಯಾಟಗಳಿಲ್ಲ
ನನ್ನ ಬರುವಿಕೆಗೆ ಕಾದಿರುತ್ತಿದ್ದ
ಅವಳೇಕೆ ಬ0ದಿಲ್ಲ....?
ಅಲ್ಲೇ...
ಸಿಮೆ0ಟಿನ ಮೇಜುಗಳಲ್ಲಿ
ಕ0ಬದ ಸ0ದುಗಳಲ್ಲಿ
ಅಡಗಡಗಿ ಹುಡುಕುತ್ತಿದ್ದ
ಓರೆಗಣ್ಣ ನೋಟಗಳೇಕಿಲ್ಲ.....?
ಕುಳಿತಲ್ಲೆ ನೋಡುತ್ತಾ
ಬಾವದ ಲೋಕ ಸುತ್ತಿ
ಕವನಗಳ ಪಲ ತ0ದ ನಗುಮಳೆಯು
ಇ0ದೆಕೆ ಸುಳಿಯುತ್ತಿಲ್ಲ.....?
ಚ0ದನಕೆ ರೇಷಿಮೆಯ
ಚೋಟು, ಗೇಣುದ್ದ ಕೂದಲು
ತಿದ್ದಿ-ತಿಡಿ ಬಾಚಿದರೂ
ವಾಲಿಕೆಯ ಮು0ಗುರುಳ ಹಾರಾಟವಿಲ್ಲ.
ಹೊತ್ತಿಗೆಯ ಎದೆಗಪ್ಪಿ
ಮಾತಿನೊಳು ಮನಮುಚ್ಚಿ
ಕ0ಡ ಪರಿ ಮೌನವಾಗಿ
ವೇಲು ತಿಕ್ಕುತ್ತಿದ್ದ
ಆ ಮೌನವೇಕಿಲ್ಲ.......?
ಕಾವೇರಿ ಇವಳಲ್ಲ
ಕಲ್ಪನೆಯು ಅಲ್ಲ
ಕಾವ್ಯ ಬಾವದೀ ಅವಳನ್ನೆ ತಬ್ಬಿ
ಕವಿತೆಗಳು ಮೊಳಗಿರಲು
ಅವಳೆಕೆ ಬ0ದಿಲ್ಲ.....?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!