ಗ್ಯಾಸ್ ಟ್ರಬ್ಲ್ :
Dear Indane customer, against your refill booking............., cash memo ..................... generated, cylinder shall be delivered shortly. Save fuel for a better tomorrow.
ಈ sms ನನ್ನ ಮೊಬೈಲ್ಗೆ ಬಂದುದು ೨೩ ಜನವರಿಗೆ...(ನಾನು ಬುಕ್ ಮಾಡಿದ್ದು ೧೩ ಜನವರಿಯಂದು) ಈ ದಿನ ೧೩ ಫೆಬ್ರವರಿ. ಇನ್ನೂ ಬಂದಿಲ್ಲ. ಕಂಪ್ಲೈಂಟ್ ಮಾಡೋಣ ಎಂದರೆ ಗ್ಯಾಸ್ ಸರಬರಾಜು ಕಂಪನಿಯವರು ಫೋನೇ ಎತ್ತುತ್ತಿಲ್ಲ. ೮೯೭೦೦೨೪೩೬೫ರ ದೂರು ಸಲ್ಲಿಸಿದರೆ-ಬೇರೆ ಒಂದು ನಂಬರ್ ಕೊಡುವರು ಅಲ್ಲಿಗೆ ದೂರು ಸಲ್ಲಿಸಿದಾಗ ಮತ್ತೆ.. ಕಂ.ನಂ.....
ಗ್ಯಾಸ್ ಟ್ರಬ್ಲ್ನಿಂದಾಗಿ ಸಲಡ್, ಜ್ಯೂಸ್ ಡಯಟ್ನಲ್ಲಿದ್ದೇವೆ.... :(
***********************
ಡಿಡಿ ಟ್ರಬ್ಲ್ :
ಅರ್ಜೆಂಟ್ ಡಿಡಿ ಬೇಕಿತ್ತು. ಬ್ಯಾಂಕ್ಗೆ ಹೋಗಿ ಫಾರ್ಮ್, ಚಕ್ ಎಲ್ಲಾ ಬರೆದು ಡಿಡಿ ಕೌಂಟರ್ಗೆ ಹೋದರೆ ಕಂಪ್ಯೂಟರ್ ವರ್ಕ್ ಮಾಡುತ್ತಿಲ್ಲ.
"ರಿಪೇರಿಯವರು ಬರಬೇಕಷ್ಟೆ.."
"ಮ್ಯಾಡಂ, ಹಿಂದಿನಂತೆ ಕೈಯಲ್ಲೇ ಬರೆದು ಕೊಡಬಹುದಲ್ವಾ?"
"ಸಾಧ್ಯವೇ ಇಲ್ಲ.. ಅಷ್ಟು ಅರ್ಜೆಂಟ್ ಇದ್ದರೆ ಬೇರೆ ಬ್ಯಾಂಕ್ಗೆ ಹೋಗ್ರೀ"
*******************
ಅಟಲ್ಜಿ "ಜನಸ್ನೇಹಿ" ಕೇಂದ್ರ : ( http://www.newindianexpress.com/states/karnataka/article1389896.ece#.Uv0... )
ರೆಸಿಡೆನ್ಷಿಯಲ್ ಸರ್ಟಿಫಿಕೇಟ್ ಬೇಕಿತ್ತು. ಹುಟ್ಟಿನಿಂದ ಕರ್ನಾಟಕದಲ್ಲೇ ಇದ್ದೇವೆ. birth certificate ನಿಂದ ಹಿಡಿದು sslc, puc, ಡಿಗ್ರಿ ಎಲ್ಲಾ ಸರ್ಟಿಫಿಕೇಟು ತೋರಿಸಿದರೂ, "ಅಪ್ಲಿಕೇಶನ್ ಫಾರ್ಮ್ನಲ್ಲೇ ಇರುವ ರೆಸಿಡೆನ್ಷಿಯಲ್ ಸರ್ಟಿಫಿಕೇಟ್"ಗೆ ಸೈನ್ ಹಾಕಿ ಕೊಡುವುದಿಲ್ಲ ಎಂದರು! "ಕಂಪ್ಯೂಟರ್ಗೇ ಫೀಡ್ ಮಾಡಬೇಕು. ಏಳು ದಿನ ಬಿಟ್ಟು ಬಂದು ತೆಗೆದುಕೊಂಡು ಹೋಗಿ" ಎಂದರು. ಅದಕ್ಕೂ ಮೊದಲು ನೋಟರಿಯ ಬಳಿಯಿಂದ ಲೆಟರ್ ತನ್ನಿ! ಎಲ್ಲಾ ತಂದು ಕೊಟ್ಟು ಏಳು ದಿನ ಬಿಟ್ಟು ಹೋದಾಗ ಆಶ್ಚರ್ಯ! ಮಿನಿಮಮ್ ಹತ್ತು ವರ್ಷ ವಾಸವಿರುವ ಸರ್ಟಿಫಿಕೇಟ್ ಬೇಕಾದಲ್ಲಿ "ಒಂದು" ವರ್ಷ ವಾಸದ ಸರ್ಟಿಫಿಕೇಟ್ ಕೊಟ್ಟರು!!
ಪ್ರತಿಕ್ರಿಯೆ (2)
ತಿಂಗಳಾದರೂ ಬಾರದ ಗ್ಯಾಸ್..ಸಂಪದದಲ್ಲಿ ದೂರಿದ ಮಾರನೇ ದಿನವೇ ಬಂತು!