ಅವಳೊಬ್ಬಳು ಮಹಿಳಾವಾದಿ

ಹೆಣ್ಣಿಗೆ  ಹೆಣ್ಣೇ ಶತ್ರು ಅನ್ನೋ ಮಾತನ್ನ ನಾವೆಲ್ಲ

ಅಳಿಸಿ ಹಾಕಲು ಹೋರಾಡಬೇಕು

ನಾವೇ ಹೆಣ್ಣಿಗೆ  ರಕ್ಷಣೆ ಕೊಡಲಿಲ್ಲ ಅಂತಾದರೆ

ಮತ್ತಾರ ರಕ್ಷಣೆಯೂ ಅವಳಿಗಿಲ್ಲ.

ಹೀಗೆ ಅಧ್ಯಕ್ಷ ಭಾಷಣ ಮಾಡಿದ ಮಹಿಳಾವಾದಿ

ಅತ್ತೆ ಮಾವ ಸತ್ತ ನಾಲ್ಕೇ ದಿನಕ್ಕೆ

ನಾದಿನಿ ಮೈದುನರನ್ನ ಮನೆಯಿಂದ ಆಚೆ ಕಳಿಸಿದಳು