ಸಮೃದವಾಗಿ ಪಸಲಿಗೆ ಬಂದ ಕಲ್ಪವೃಕ್ಷ ತೋಟಗಳು ,
ರೋಗ ಮುಕ್ತ ಗದ್ದೆಗಳು ,
ಎತ್ತರಕ್ಕೆ ಬೆಳೆದು ರಾಗಿ ಪೈರುಗಳು ,
ಜುಳು ಜುಳು ಹರಿಯುವ ಕೆರೆ ಕೋಡಿ ,
ಟಾರು ಕಾಣದ ರಸ್ತೆಗಳು,
ಓಡಾಡಲು ಎತ್ತೀನ ಬಂಡಿಗಳು ,
ವಿಧ್ಯುತ್ ಇಲ್ಲದ ರಾತ್ರಿಗಳು ,
ಬೆಳಕಿಗಾಗಿ ಬಳಸುತಿದ ಲಾಟಿನಗಳು,
ಜಗಲಿ ಕಟ್ಟೆ ಕಾಡು ಹರಟೆ,
ಕೆರೆ ಕಟ್ಟೆ ಸಖಿಗೀತ ,
ಮಾನವ ಸಂಬಂದಗಳ ಸಂಕೋಲೆಗಳು,
ಮುಂಜಾನೇಯ ಗುಬ್ಬಚ್ಚಿ ಕಲರವ,
ಇವೆಲ್ಲ ಅಂದಿನ ನನ್ನ ಹಳ್ಳಿ ,
ಆದ್ದೇ ಇಂದು,
ನುಸಿ ರೋಗ ಪೀಡಿತ ಕಲ್ಪವೃಕ್ಷ ತೋಟಗಳು,
ರಾಸಾಯನಿಕ ಗೋಬರದಿಂದ ರೋಗ ಪೀಡಿತ ಗದ್ದೆಗಳು,
ಬಾಡಿದ ರಾಗಿ ಪೈರುಗಳು,
ಬತ್ತಿರುವ ಕೆರೆಗಳು,
ಸುಮ್ಮಾರಾಗಿ ಟಾರ್ ಕಂಡ ರಸ್ತೆಗಳು,
ಓಡಾಡಲು ಬಸ್‌ಗಳು ,
ಕಡಿಮೆ ಆಗುತಿರುವ ಎತ್ತು ಎತ್ತಿನ ಬಂಡಿಗಳು,
ನಿರಂತರ ವಿಧ್ಯುತ್ ಇಂದ ಕಾಣದಾಗಿರುವ ಲಾಟಿನ್ಗಳು ,
ಟೀವೀ ಅನ್ನೋ ರಕಾಸ್ನನ ಮುಂದೆ ನಿಂತು ಹೋಗುತಿರುವ ಜಗಲಿ ಕಟ್ಟೆ ಕಾಡು ಹರಟೆ,
ಇಲ್ಲವಾಗುತ ಇರುವ ಸಖಿಗೀತ,
ಬಿರುಕು ಬಿಡುತಿರುವ ಮಾನವ ಸಂಬಂಧಗಳು,
ಬೃಹದ್ ಟವರ್ ಇಂದಾಗಿ ಇಲ್ಲವಾಗಿ ಇರುವ ಗುಬ್ಬಚ್ಚಿಗಳು,
ಇದು ನನ್ನ ಈಗಿನ ಹಳ್ಳಿ.
ಬರೆದ ಬಡಪಾಯಿ,
ಹರೀಶ್ ಎಸ್ ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!