ಬರುತಿಹರು ನಾಯಕರು ಹೊಸಕನಸ ಹೊತ್ತು

ತರುತಿಹರು ಲಾಲಸೆಯ ಗ೦ಟುಗಳ ಸೊತ್ತು

ಸುರಿಸಿಹರು ನುಡಿಮಳೆಯ ಕೊ೦ಕಿಸುತ ಕತ್ತು

ಹರಕು ಗ೦ಟಲುಗಳಲಿ ಏರಿತ್ತು ಮತ್ತು

ನಡುಮಾರ್ಗ ತು೦ಬಿ ತುಳುಕುತಲಿವರ ಸ೦ತೆ

ನಡೆವ ನಗರದ ತು೦ಬ ನೋಟುಗಳ ಕ೦ತೆ

ದುಡಿವ ಮಣ್ಣಿನ ಮಕ್ಕಳಿಗೆ ಸತತ ಚಿ೦ತೆ

ತುಡಿವ ಮನಸುಗಳೆಲ್ಲವೇನಾದವ೦ತೆ?

ಮೊಸಳೆಗಣ್ಣೀರಗರೆಯುತ್ತ ಕರಗಳ ಚಾಚಿ

ಹುಸಿಯನಗೆಯ ಕೂಟದಲಿ ಮತಗಳನು ದೋಚಿ

ಹಸಿಲೊಟ್ಟೆಗಳಲಿ ಸತ್ಯವನೆ ಮರೆಮಾಚಿ

ಕಿಸೆಗಳನು ತು೦ಬುವರು ಧನಕನಕ ಬಾಚಿ

ಐದು ವರುಷಗಳಾಗೆ ಮರುಕಳಿಸಿ ದಾಳಿ

ಬೈದು ಭ೦ಗಿಸಿ ಪರರ ಮರೆಯುವರೆ ಚಾಳಿ

ಹೈದರೆದೆ ಕೋಟೆಗಳ ಹೊಗುತಲಿವರಾಳಿ

ಜೈ ದನಿಯು ಅನುರಣಿಸೆ ಮೆರವಣಿಗೆಯೋಳಿ

ಶತಮಾನದೂಳಿಗವ ಮೆಟ್ಟಿ ನಡೆದಾಡಿ

ಹಿತವಾಗಿ ನೆಟ್ಟ ವನಸುಮವಿ೦ದು ಬಾಡಿ

ಮತದಾನವೆ೦ಬ ಸನ್ಮತವಾಯ್ತು ಖೋಡಿ

ಮತಿಮರೆತು ನಿ೦ತಿಹೆವು ಈ ಜನರ ನೋಡಿ