ಚಾ ಮಾಡಿದ ಬಾಲಕ‌

ಆದನಿಂದು ಪಾಲಕ‌

ಸಂಸಾರವೊಂದೇ ಅಲ್ಲ‌

ಅನ್ನ ನೀರೂ ಬಿಟ್ಟನಲ್ಲ‌

ದೇಶವೆಲ್ಲ ಸುತ್ತಿದ‌

ಹಿಮಾಲಯವೂ ಹತ್ತಿದ‌

ಜನನಿ, ಜನ್ಮಭೂಮಿಗಿಂತ‌

ಮಿಗಿಲಿಲ್ಲ ವೆಂಬುದರಿತ‌

ದೇಶಕಾಗಿ ಸಾಯಲಿಲ್ಲ‌

ಸೆರೆಮನೆಯ ಸೇರಲಿಲ್ಲ‌

ಕೊರಗಿ ಕೊರಗಿ ಸೊರಗಿದ‌

ತಾ ಮಮ್ಮಲ ಮರುಗಿದ‌

ಸಾಯದಿದ್ದರೇನಂತೆ

ಬದುಕಿ ತೋರಬಹುದಂತೆ

ಮೈ ಕೊಡವಿ ಎದ್ದ‌

ದೇಶಸೇವೆಗಾದ ಸಿದ್ಧ‌

ಆಧುನಿಕ ಬುದ್ಧ‌, ನಮ್ಮ‌

ಆಧುನಿಕ ಬುದ್ಧ‌.

 ‍   : ಮುರಳಿಧರ್ ಎಂ.ಎಸ್. ಶಿರಾ.

‍‍‍