ನನ್ನ ಸ್ಮೃತಿಯಲ್ಲಿ ಬಂದದ್ದನ್ನು ಹಾಗೆಯೇ ಗೀಚಿದ್ದೇನೆ, ತಪ್ಪಾಗಿದ್ದಲ್ಲಿ ಕ್ಷಮಿಸಿ. ಇದು ನನ್ನ ಸಂಪದದ ಮೊದಲ ಬರಹ!!

 

ಒಂದಿಷ್ಟು ಪ್ರೀತಿ!!

ಬಯಸಿದೆ ಈ ಜಗದಿ ಒಂದಿಷ್ಟು ಪ್ರೀತಿ!

ಏಕೋ ಕಾಣೆ ಸಿಗಲಿಲ್ಲ!!

ಏನೋ ಹುಡುಕಲು ಹೋಗಿದಾ ರೀತಿ!

ಯಾಕೋ ಸರಿ ಬರಲಿಲ್ಲ!!

ದುಗುಡ, ದುಮ್ಮಾನಗಳ ನಾನಾ ಫಜೀತಿ!

ಎಲ್ಲಿಯೂ ನೆಲೆ ಸಿಗಲಿಲ್ಲ!!

ನನ್ನಂತೆಯೇ ಇರಬಹುದೇನೋ, ಈ ಪ್ರಪಂಚದ ಸ್ಥಿತಿ!

ಎಷ್ಟು ತೋಚಿದರೂ, ತರ್ಕಕ್ಕೆ ನಿಲುಕಲಿಲ್ಲ!!

 

ನೆನಪು!!

ಕೆದಕದಿರು, ಓ ಮನಸೇ...

ನನ್ನೀ ಹಳೆಯ ನೆನಪುಗಳ..

ಬಯಸಿ ಮರೆಯಲು ನಿನ್ನಾ..

ಹರಿದಿರುವೆ ಹಳೆಯ ಹಾಳೆಗಳ..

ಬರೆಯಲೊಂದು ಹೊಸ ಅಧ್ಯಾಯ,

ನಿರ್ಧರಿಸಿದೆ ಈ ಮನ..

ಚೂರು ಸಹಕರಿಸುವೆಯಾ ನನ್ನಾಸೆಯಾ..?