೨೦೦೪ ರಲ್ಲಿ ಕನ್ನಡದ ಬ್ಲಾಗುಗಳು, ಕನ್ನಡ ಯುನಿಕೋಡ್ ನಲ್ಲಿದ್ದ ವೆಬ್ಸೈಟುಗಳು ಹೆಚ್ಚು ಇರಲಿಲ್ಲ. ಆಗ ಕನ್ನಡ ಲಿಪಿ ಬಳಸಿ ಕನ್ನಡದಲ್ಲಿ ಬರೆಯುವವರಿಗಾಗಿ ಎಂದು ಒಂದು ವೇದಿಕೆ ನಿರ್ಮಿಸುವ ಪ್ರಯತ್ನದಲ್ಲಿ ॑ಸಂಪದ॑ ಹುಟ್ಟಿಕೊಂಡಿದು. ಸಂಪದಕ್ಕೀಗ ಹತ್ತು ವರ್ಷಗಳು. ಇಷ್ಟು ವರ್ಷಗಳಲ್ಲಿ ಸಂಪದ ಎಷ್ಟೋ ಬರಹಗಾರರಿಗೆ ನೆಲೆ ನೀಡಿದೆ, ಅವರ ಆತ್ಮವಿಶ್ವಾಸ ಬೆಳೆಸಿದೆ. ಈಗಲೂ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದಲ್ಲದೆ ಮುಂಚಿನಿಂದ ಬರೆಯುತ್ತಿರುವವರಿಗೂ ಸಹೃದಯೀ ವೇದಿಕೆಯಾಗಿ ಬಹಳಷ್ಟು ಕನ್ನಡಿಗರ ನಿತ್ಯ ಆನ್ಲೈನ್ ಜೀವನದ ಒಂದು ಅಂಗವಾಗಿಯೇ ಹೋಗಿದೆ.
ಇತ್ತೀಚೆಗೆ ಫೇಸ್ಬುಕ್ ಜನಪ್ರಿಯತೆಯಿಂದಾಗಿ ಇರುವ ಕೆಲವೇ ಕನ್ನಡ ಅಂತರ್ಜಾಲ ತಾಣಗಳು ಸೊರಗುತ್ತಿರುವಾಗ ॑ಸಂಪದ॑ಕ್ಕೆ ಕೂಡ "ಮುಂದೇನು?" ಎಂಬ ಪ್ರಶ್ನೆ ಕಾಡಿದ್ದುಂಟು. ನಡೆಸಿಕೊಂಡು ಹೋಗುವುದು ಸ್ವಲ್ಪ ಕಷ್ಟವಾದರೂ ಇದನ್ನು ನಿಲ್ಲಿಸಬಾರದು ಎಂಬ ಧೃಡ ನಿರ್ಧಾರದೊಂದಿಗೆ ಸಾಧ್ಯವಾದಷ್ಟು ನಡೆಸಿಕೊಂಡು ಹೋಗುತ್ತಿದ್ದೇವೆ. ಇನ್ನು ಇದರ ಉಪಯುಕ್ತ ಬಳಕೆ ಮಾಡುವುದು ಸಹೃದಯೀ ಓದುಗರು, ಬರಹಗಾರರಾದ ನಿಮಗೆ ಬಿಟ್ಟದ್ದು.
ಪ್ರತಿಕ್ರಿಯೆ (6)
ಹತ್ತು ವರ್ಷದ ಸಾಧನೆ ನಿಜಕ್ಕೂ ಹರ್ಷದಾಯಕ.
ನನ್ನಂತ ನೂರಾರು ಜನರಿಗೆ ಬರೆಯುವ ಉತ್ಸಾಹ ತುಂಬಿ ಬರೆಯುವ ಬಗೆ ಕಲಿಸಿದ ’ವೇದಿಕೆ’ ಸಂಪದ .
ಪೇಸ್ ಬುಕ್ಕಿನಂತ ತಾಣಗಳು ಬರಲಿ ಬಿಡಿ, ಅದರ ಸ್ವರೂಪವೇ ಬೇರೆ,
ಸಂಪದದ ಸ್ವರೂಪವೇ ಬೇರೆ.
ಸಂಪದದ ಎಲ್ಲರಿಗೂ ಅಭಿನಂದನೆಗಳು
ಲೇಖಕರು: hpn
ವಿಧ: ಬ್ಲಾಗ್ ಬರಹ
July 21, 2005 2 ಪ್ರತಿಕ್ರಿಯೆಗಳು 2,644
Here's my first blog entry as I set up sampada. :) --------------------------------------
ಮೊದಲ ಬ್ಲಾಗ್ ಜುಲೈ ೨೧ ೨೦೦೫ ರಲ್ಲಿ ಇದೆ !