೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ___LINK_OPEN_href="http://www.new.dli.ernet.in/cgi-bin/metainfo.cgi?&title1=Maganei%20Alla&subject1=GENERALITIES&year=1932&language1=kannada&pages=38&barcode=2030020028500&publisher1=Ya%20Gu%20Kulakarnd-i&vendor1=til&scanningcentre1=rmsc,%20iiith%20&slocation1=OSU&sourcelib1=NONE&digitalrepublisher1=Digital%20Library%20Of%20India&rights1=OUT_OF_COPYRIGHT&format1=Tagged%20Image%20File%20Format&url=/data7/upload/0198/468%20target="___ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ.  ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ -  "ಮಗನೇ ಅಲ್ಲ!!  ಅಥವಾ ವಿಚಿತ್ರ  ಕಾರಸ್ಥಾನ !"  

ಧಾರವಾಡದ ಬಳಿಯ ಆನಂದವನ, ಅಗಡಿಯ   ಶ್ರೀ ಶೇಷಾಚಲ ಪ್ರೆಸ್ಸ್ ಮತ್ತು ಗ್ರಂಥಮಾಲೆಯ  ಪ್ರಕಟಣೆ ಇದು. ಕನ್ನಡ, ದೇವನಾಗರೀ, ರೋಮನ್ ಲಿಪಿಗಳಲ್ಲಿ   ಪ್ರಕಾಶನ  ಸಂಸ್ಥೆಯ ಹೆಸರನ್ನು ಬರೆದಿದ್ದಾರೆ . ಅಡಿಯಲ್ಲಿ - ಮರಾಠಿಯಲ್ಲಿ  ' ಹೇ  ಪುಸ್ತಕ ಬಿ.ಪ.ಕಾಳೆ , ಯಾನೀ ಅನಂದವನ-ಅಗಡಿ ಯೇಥೀಲ ಆಪಲ್ಯಾ ಶ್ರೀ  ಶೇಷಾಚಲ ಛಾಪಖಾನ್ಯಾತ ಛಾಪಿಲೆ' ಅಂತ ಮರಾಠಿ-ದೇವನಾಗರಿಯಲ್ಲಿ ಮುದ್ರಿಸಿದ್ದಾರೆ!  ಇದು ಸದ್ಬೋಧಚಂದ್ರಿಕೆಯ 'ಆಷಾಢ ಶಕೆ ೧೮೫೪, july 1932'ರ ನಾಲ್ಕನೇ ಸಂಚಿಕೆ .  ಈ ಅಗಡಿಯ  ಶೇಷಾಚಲ ಸಂಸ್ಥೆ,  ಅಲ್ಲಿಯ ಶೇಷಾಚಲ ಸಾಧುಗಳು   ಮಾಡಿದ ಕನ್ನಡ ಸೇವೆ ಅಪಾರವಾಗಿದ್ದಿರಬೇಕು. ಇರಲಿ.  ಈ ಪುಸ್ತಕವನ್ನು ತಿರುವಿ ಹಾಕಿದಾಗ ......

ಈ ಕತೆಯು  ೨೫ ಪುಟಗಳದ್ದು.  ಪ್ರತಿ ಅಧ್ಯಾಯಕ್ಕೆ ಒಂದು ತಲೆಬರಹ - ಮತ್ತು ಒಂದು ಅಡಿಬರಹ  .

ಆ ತಲೆಬರಹಗಳು , ಅಡಿಬರಹಗಳು , ಒಳಗಿನ ಹೂರಣ ಏನೆಂದು ನೋಡೋಣ ಬನ್ನಿ .

೧)  ಇದ್ದ ಮೂವರಲ್ಲಿ ಕದ್ದವರಾರು ? - (ರವಿಕಾಣದುದಂ ಕವಿ ಕಾಂಬಂ)  

    ಒಂದು ಬ್ಯಾಂಕು , ಅಲ್ಲಿ ತಿಜೋರಿ , ಅದನ್ನು ತೆಗೆಯಬಲ್ಲವರು ಇಬ್ಬರು , ಮ್ಯಾನೇಜರೂ  ಸರಾಫ(ಕ್ಯಾಶಿಯರ್)ನೂ  ಅದರ ಚಕ್ರದಲ್ಲಿಯ ಅಕ್ಷರಗಳ ಸಂಯೋಜನೆಯಿಂದ ತೆರೆಯುತ್ತಿದ್ದರು , ಮುಚ್ಚುತ್ತಿದ್ದರು.  ಆ ಸಂಕೇತ  ಶಬ್ದವನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದರಂತೆ ! ಅಲ್ಲಿಂದ ಆವತ್ತಿನ ದೊಡ್ಡ ರಕಮು ಕಳುವಾಗಿದೆ! ಪೋಲೀಸ್  ಇನ್ಸಪೆಕ್ಟರ್  ಬಂದರು ," ದೊಡ್ಡ ದೊಡ್ಡವರು ಒಂದೇ ನೋಡಿರಿ!  ಇನ್ಸಪೆಕ್ಟರರು ಮ್ಯಾನೇಜರರ ಮಾತು ದಿಟವೆಂದರು. ಸರಾಫರಿಗೆ ಕಾರಾಗ್ರಹವಾಸವಾಯಿತು, ಪೋಲೀಸರ ಕೆಲಸ - ತಪ್ಪು ಮಾಡಿದವರು ಯಾರಾದರೇನು? ಒಟ್ಟಿನ ಮೆಲೆ ಒಬ್ಬನಿಗೆ ಶಿಕ್ಷೆ ಅದರಾಯಿತು. "

ಆಗ ಅಲ್ಲಿಗೆ "ಪತ್ತೇದಾರ ಶಿರೋಮಣಿ" ಭೀಮಸಿಂಗನ ಪ್ರವೇಶ.

೨) ಇವೆಲ್ಲ ಸಾಧುಗಳಿಗೇಕೆ? ( ಬೆಳ್ಳಗಿದ್ದುದೆಲ್ಲ ಹಾಲಲ್ಲ)

ಪತ್ತೇದಾರನು ಸಾಧು ವೇಶದಿಂದ ಕ್ಯಾಶಿಯರನ ಮನೆಗೆ ಹೋದಾಗ ಅವನ ಕೈಗೆ ಒಂದು ಕಾಗದ ಸಿಗುವದು .

೩) ಚಿತ್ರಮಯ ಪತ್ರ   ( Little flower if I could understand what you are , root and all in all , I should know what God and man is )

ಈ ಇಂಗ್ಲೀಶ್ ವಾಕ್ಯದ ಅರ್ಥ ನಿಮಗೇನಾದರೂ ಅಯಿತೇ?  - ಬಹುಷ:  ಅ ಕಾಲಕ್ಕೆ   ಕಲಿಯುವವರು ಇಂಗ್ಲೀಶನ್ನೇ  ಕಲಿಯುತ್ತಿದ್ದರು , ಕನ್ನಡ  ಪುಸ್ತಕಗಳೇ ಇದ್ದಿಲ್ಲ .  ಈ ಇಂಗ್ಲೀಷ್ ವಿದ್ಯಾವಂತರಿಗಾಗಿ ಕನ್ನಡ ಪುಸ್ತಕಗಳು ಶುರು ಆಗಿರಬೇಕು !     ಹಿಂದಿನ ಕಾಲಕ್ಕೆ   ಕಲಿಯುವವರು ಇಂಗ್ಲೀಶನ್ನೇ  ಕಲಿಯುತ್ತಿದ್ದರು, ಮಧ್ಯೆ ಕನ್ನಡ ಬಂದಿತು , ಈಗ ಮತ್ತೆ ಎಲ್ಲರೂ ಇಂಗ್ಲೀಷನ್ನೇ ಕಲಿಯುತ್ತಿದ್ದಾರೆ !!

 ಇರಲಿ . ನಮ್ಮ ಪತ್ತೇದಾರನ ಕೈಗೆ ಸಿಕ್ಕ ಕಾಗದದಲ್ಲಿ ಹೀಗಿತ್ತು . 532 c2 , 10 :871 c1,5 - ಉ: 530,c,1,9  ........(ಇತ್ಯಾದಿ )   ... ಇದ್ದೇನೆ .....474,c219 (ಇತ್ಯಾದಿ ) ...+ ಇ.ಬಾ.

ಇ.ಬಾ.  ಎಂದರೆ ಇಲ್ಲಿಗೆ ಬಾ ಎಂದಿರಬೇಕು ಎಂದು ನಾನು ಊಹಿಸಿದೆ!   ನಮ್ಮ ಪತ್ತೇದಾರನೂ ಅವನ ಜಾಣ ಪತ್ನಿಯೂ ಈ  ಗೂಢಲಿಪಿಯನ್ನು ಬಿಡಿಸುವರು ! ಅದು ಹೇಗೆ ?  ಅವರು ಇದು ಒಂದು ಶಬ್ದಕೋಶ ( ಅದೇರಿ ಡಿಕ್ಶನರಿ!!!) ದಲ್ಲಿನ  ಪುಟ/ಕಾಲಂ/ಶಬ್ದದ ಸಂಖ್ಯೆ   ಎಂದು ತೀರ್ಮಾನಕ್ಕೆ ಬರುವರು.   

೪)  ಎಳೆಯಂತೂ ಸಿಕ್ಕಿತು! ಹಚ್ಚಡ ನುಂಗುವದು ಹೇಗೆ? ( Wait, watch and Pray , Plead and then Proceed)

 "ಅನಂತರ ನಮ್ಮ ಪತ್ತೇದಾರನು  ಪ್ರಸಿದ್ಧ  ಪುಸ್ತಕ ವ್ಯಪಾರಿಯೊಬ್ಬನ ಬಳಿಗೆ ಹೋದನು. ನಮ್ಮ ಕಥಾನಕವು ನಡೆದ ಕಾಲದಲ್ಲಿ ಬೆಂಗಳೂರಿಗೆಲ್ಲ  ಒಂದೇ ಒಂದು ಪುಸ್ತಕದ ಅಂಗಡಿ ಇತ್ತು . ಆರು ವರ್ಷಗಳಿಂದಲೂ ಹನ್ನೆರಡು ಕನ್ನಡ ಕೋಶಗಳು ಖರ್ಚಗದೇ ಉಳಿದಿದ್ದವೆಂದೂ ಈಗ ೫-೭ ತಿಂಗಳ  ಹಿಂದೆ ಜಯಲಕ್ಷ್ಮೀ ಬ್ಯಾಂಕಿನ ಮ್ಯಾನೇಜರರಾದ ಗುಂಡೇರಾಯರು ಒಂದು ಪುಸ್ತಕವನ್ನು ತೆಗೆದುಕೊಂಡರೆಂದೂ ತಿಳಿದು ಬಂದಿತು. "

ಕ್ಯಾಶಿಯರನ ಬಳಿಯೂ ಇಂಥ ಒಂದು ಶಬ್ದಕೋಶವು ಇರಬೇಕೆಂದು ನಮ್ಮ ಪತ್ತೇದಾರನು ತರ್ಕಿಸಿದ್ದು ನಿಜವಾಯಿತು. ( ನಮ್ಮ ಪತ್ತೇದಾರನಾದರೂ  ತನ್ನಲ್ಲಿರುವ ಪತ್ರದ ಗೂಢಲಿಪಿಯನ್ನು ಡಿಕೋಡ್ ಮಾದಲು ಇನ್ನೊಂದು  ಪ್ರತಿಯನ್ನು ಖರೀದಿ ಮಾಡಿದ ಎಂದುಕೊಂಡಿರಾ? ಅದು ತಪ್ಪು,    ಅವನೂ ಅ ಶಬ್ದಕೋಶವನ್ನು  ಕ್ಯಾಶಿಯರನ ಕಡೆಯಿಂದ ಏನೋ ನೆವ ಹೇಳಿ ಎರವಲು ಪಡೆಯುವನು!!)

ಕತೆ ನಮಗೆ ಬೇಡ - ಅಲ್ಲಿ ಸಾಕಷ್ಟು ತಿರುವುಗಳು , ಅಚ್ಚರಿಗಳೂ ಇವೆ . ನಾನು ಕತೆಯನ್ನು ತಿಳಿಸುತ್ತಿಲ್ಲ  , ಅಲ್ಲಿನ ಸ್ವಾರಸ್ಯಗಳನ್ನು ತಿಳಿಸುತಿದ್ದೇನೆ.

೫)  ನಾರಿಯ ತಂತ್ರವು ನಾರಾಯಣನಿಗೂ ತಿಳಿಯದು!   (Trust not your daughters mind by what you see them act)

೬) ಆಟಕ್ಕೆ ತಕ್ಕ ವೇಶ , ವೇಷಕ್ಕೆ ತಕ್ಕ ಭಾಷೆ  ( A jests prsperity lies in the ears of those who that here it )

೭) ರಹಸ್ಯ ಸ್ಫೋಟನ -೧  ( ಹಿಡಿದ ಕಾರ್ಯ ಸಾಧಿಸಲು ಹೆಣವನ್ನಾದರೂ ಹೊರಬೇಕು)

೮) ರಹಸ್ಯ ಸ್ಫೋಟನ -೨ ( Take warnings  hence ye ,  damsels fair ,  Of mens insiduous arts beware)

ಪತ್ತೇದಾರ ಭೀಮಸಿಂಗನನ್ನು  ಚಂಚಲೆಯು ಹೀಗೆ ಸಂಬೋಧಿಸುವಳು "ಜ್ಞಾನಿಗಳೇ " !!

೯) ಮಾಡಿದ ಪಾಪಕ್ಕೆ ಮನವೇ ಸಾಕ್ಷಿ ( Early or late , we stoop  to fate)

೧೦) ವಿಚಿತ್ರದ ಮೇಲೆ ವಿಚಿತ್ರ ( unity  in diversity )

ಆಂ? 1932 ರ ಪುಸ್ತಕದಲ್ಲಿ  ನಾವು ಈಗ ದಿನ ನಿತ್ಯ ಕೇಳುವ unity  in diversity !!???

೧೧) ಉಪಸಂಹಾರ

"ಇಲ್ಲಿಗೆ ನಮ್ಮ ಕಥೆಯು ಮುಗಿಯಿತು"

ನಮ್ಮ ಕಥೆ ? ಮುಗಿಯಿತು?

--- ಸಂಪೂರ್ಣಂ ---