ಹನಿಯ ದನಿಯು, ಸೊಂಪಾದ

ಮೌನವನ್ನಲಂಕರಿಸಿದ ಮುತ್ತು

ಭಾವದಲ್ಲಿ ತನುಮನವು ಜೊತೆಯಾಗಿ

ನೆಂದ ಹೊತ್ತು

ಅಮ್ಮನ ಮಡಿಲಲ್ಲಿ ಪ್ರೀತಿಯ ಸೊತ್ತು

 

ಹಸಿರಾದ ಉಸಿರು ಬಿತ್ತಿದೆ ಮೊಗದಲ್ಲಿ ಹೊಳಪು

ಕೆಸರಾದಳು ತಾವರೆ ಹೂವ ಹೆರಲು

ನಗುವ ಚೆಲ್ಲುತ್ತಿರೆ ಮೋಡ ಮುಸುಕಿದ ಕಣ್ಗಳು

ತಾನೆ ಕರಗಿದಳು ಜಗದ ದಾಹ ನೀಗಿಸಲು

ಸರ್ವಕಾಲದ ದೇವರು

 

ನೀನು ಅವನು ಎನ್ನದೆ ಸಲಹುತ್ತಿರುವ ಪ್ರೀತಿಯು

ಮರುಗುವ ಜೀವಕ್ಕೂ ಆಪ್ತಳಾದಳು

ಜಗವು ನುಡಿಸುವ ವೀಣೆಗೆ ಶೃತಿಯಾಗಿ

ಹನಿಗಳ ಭಾವದಲ್ಲಿ ಬೆರೆತು ಹರ್ಷಧಾರೆಯಾದಳು.