ಟೂವ ಇಂತೊಂದು ದೇಶ

ದೇಶ ಎಂದರೆ ತಪ್ಪಾಗುವುದು

ಅದಕಿಲ್ಲ ಆ ವೇಶ

ಕಾಡು ಬೆಟ್ಟದ ನಡುವೆ

ನಾಗರೀಕತೆ ಎಂಬ ಅನಾಗರೀಕತೆಗೆ

ದೂರವೇ ಉಳಿದು ಹಾಡುತಿಹ

ಆದಿ ಮಾನವರ ಲೋಕ

ಟೂವ ಇಂತೊಂದು ಲೋಕ

ಭೂಪಟದಿ ಸಿಗದು ಅದರ ಹೆಸರು

ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು

ಪರತಂತ್ರವಾದರೂ ಸ್ವಾತಂತ್ರವೇ ಆಗಿತ್ತು

ಸ್ವಾತಂತ್ರ್ಯವೇ ಆಗಿಹುದು

ಟೂವ ಎಂಬೀ ಲೋಕ

ಟೂವನ ಕಂಠದ ಕೂಗಿಗೆ

ತನು ತನ್ನ ಮರೆತಿಹುದು

ಮನ ಸ್ಥಬ್ದವಾಗಿಹುದು

ಕೃತಜ್ಞನಾಗಿಹುದು

ಈ ಡಾಕ್ಯುಮೆಂಟರಿ ನೋಡಲು ಮರೆಯದಿರಿ: ___LINK_OPEN_href="https://www.youtube.com/watch?v=Mn4_40hAAr0"___ದಿ ಲಾಸ್ಟ್ ಜರ್ನಿ ಆಫ್ ಅ ಜೀನಿಯಸ್ (ರಿಚರ್ಡ್ ಫ಼ೆಯ್‍ನ್ಮನ್)

ಟೂವದ ಬಗ್ಗೆ ವಿಕಿಪೀಡಿಯದಲ್ಲಿ ಸ್ವಲ್ಪ ಮಾಹಿತಿ: ಟೋವ

ಇತರ ಖಡತಗಳು: ೧ ___LINK_OPEN_href="http://ahttps://www.math.dartmouth.edu/archive/m5f10/public_html/Levin1999SciAm_tuvan_throat_singing.pdf"___THE THROAT SINGERS OF TUVA ೨ REISE INS ASIATISCHE TUWA