ಕನ್ನಡ ನಾಡು ಬಲು ಸುಂದರ

 ಕನ್ನಡ ನುಡಿ ಅತಿ ಸುಮಧುರ

 ಕನ್ನಡಿಗರ ಮನಸ್ಸು ಮಧುರ

 ಕನ್ನಡ ನಾಡು ಹೊನ್ನಿನ ನಾಡು

 ಇದುವೆ ನನ್ನಯ ಹೆಮ್ಮಯ ನಾಡು

 ಶಿಲ್ಪಕಲೆ ಸಾಹಿತ್ಯದ ತವರಿನ ಬೀಡು

ಕನಕ,ಪುರಂದರರು ನೆಲೆಸಿದ ನಾಡು

ವಚನಕಾರರು ಜನಿಸಿದ ನಾಡು

ಅಷ್ಟಜ್ಞಾನಪೀಠವ ಗಳಿಸಿದ ನಾಡು

 ಇದುವೆ ನನ್ನಯ ಹೆಮ್ಮಯ ನಾಡು

ಕೈ ಬೀಸಿ ಕರೆಯುತ್ತಿದೆ ಜೋಗದ ಸಿರಿ

ಕನ್ನಡ ನಾಡಿನ ಚಂದದ ವನಸಿರಿ

 ನೋಡಬೇಕು ಕಾರವಾರದ ಕಡಲ ತೆರೆ

ಬೇಲೂರು ಹಳೆಬೀಡಿನ ಕುಸುರಿಯ ಕಲೆ

ಇದುವೆ ನನ್ನಯ ಹೆಮ್ಮಯ ನಾಡು

ಕವಿ ವರೇಣ್ಯರು ಜನಿಸಿದ  ಈ ನಾಡು

 ವೀರ ಶೂರ  ಗಂಡುಗಲಿಗಳ ಬೀಡು

ತುಂಗೆ  ಕೃಷ್ಣೆ ಕಾವೇರಿ ಹರಿಯುವರು ಇಲ್ಲಿ

ಕನ್ನಡ ನಾಡು ಸುವರ್ಣದ ಬೀಡು

ಇದುವೆ ನನ್ನಯ ಹೆಮ್ಮೆಯ ನಾಡು.