ಮೇಲೆ ಮುಗಿಲು

ಕೆಳಗೆ ಭುವಿಯು

ಅಲ್ಲೇ  ನಿಂತಿಹೆನು

ರಸ್ತೆ  ಬದಿಯ ಕಲ್ಲಾಗಿ

ದಾರಿ ಹೋಕರ ದಿವ್ಯ

ನಿರ್ಲಕ್ಷ್ಯಕೆ ಗುರಿಯಾಗಿ - - -

 

ಯಾರದೋ ದಾಳಕೆ

ಮತ್ಯಾರದೋ ಶಾಪಕೆ

ತನ್ನದಲ್ಲದ ಪಾಪಕ್ಕೆ  

ಬಲಿಯಾದ ಸಂತಾಪಕೆ

ನಿಂತಿಹೆನು ಕಲ್ಲಾಗಿ

ಅಸ್ತಿತ್ವವಿಲ್ಲದ ಬದುಕಿನ

ಸಾಕ್ಷಿಯಾಗಿ - - -

 

ಕಾದಿರುವೆನು ರಾಮ 

ನಿನ್ನ ಬರುವಿಗೆ 

ನಿನ್ನ ಪಾದಸ್ಪರ್ಶವಾದ

ಕ್ಷಣವೇ ನನ್ನ ಜೀವದುತ್ಕರ್ಷವು - - -

 

ಕಮಲಬೆಲಗೂರ್