ಕಟ್ಟಿದರೊಂದು

ಸುಂದರ, ಸ್ಮಾರಕವ

ಶ್ರೀಮಂತ ನಗರದ

ಪುರಜನರು 

ತಮ್ಮನುದ್ಧರಿಸಿದ

ಕವಿಯ ಸ್ಮರಣಾರ್ಥ - - -

ಜೋಪಾನ

ಮಾಡಿದರು

ಖಾಲಿ ಹಾಳೆಯಲಿ 

ದಾಖಲಿಸಿದ

ಅವನ ಖಾಲಿತನವ - - -

ಆಗಬಹುದಿತ್ತವ

ಸುದ್ದಿಯಾದವರ

ನಡುವೆ  ರಾರಾಜಿತ.

ಆದರೀ ಕ್ರೂರ ಜಗದ

ಕಣ್ಣಿಗೆ  ಅವನೊಬ್ಬ

ಪರಾಜಿತ - - -

ಮುರುಕು ಜೋಪಡಿ

ಮಿಣುಕು  ಹಣತೆ ಜೋಡಿ

ಮೋಡದಾಚೆಯ

ಮಿನುಗು ನಕ್ಷತ್ರದತ್ತ

ಮುಖಮಾಡಿ  ತನ್ನೆಲ್ಲ

ನೋವು ಹತಾಶೆ 

ಗಳ ಭಟ್ಟಿಯಿಳಿಸಿ ,

ಹಸ್ತಪ್ರತಿಗಳಾಗಿಸಿ

ವಾಸ್ತವತೆಯ ವ್ಯಂಗ್ಯ

ಬದುಕಿಗೆ ಬೆನ್ನುಮಾಡಿ

ಹೊರಟವನಿಗೆ  ವಿದಾಯ

ಹೇಳುತ್ತಾ.- - -

ಸಂಭ್ರಮಿಸಿದರು

ವರ್ಷ ವರ್ಷ

ಉತ್ಸವಗಳಾಚರಿಸಿ 

ಕವಿಯ ಹೆಸರಲೀ---??

ಕಟ್ಟಿದರೊಂದು

ಸುಂದರ, ಸ್ಮಾರಕವ

ಶ್ರೀಮಂತ ನಗರದ

ಪುರಜನರು  ತಮ್ಮ -

ನುದ್ದರಿಸಿದ ಕವಿಯ

ಸ್ಮರಣಾರ್ಥ - - -

ಕಮಲಾಬೆಲಗೂರ್