ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು
ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು
ನಿದಿರೆಯಮೃತದ ಸವಿಯು ಮನದುಂಬಿರಲು
ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ !
ನಿನ್ನ ಕನಸಿನಲೇ ಅರಳಿರುವೆ
ನಿನ್ನ ಮನೆ ಅಂಗಳದಲಿ ನಿಂದಿರುವೆ
ನನ್ನ ಕೈ ಹಿಡಿದು ಕರೆತಂದ ದೇವಿಯಾರು?
ಚನ್ನ ಚೆಲುವೆಯ ಸಮ್ಮೋಹನದ ತೇರು
ಸುಳಿಗಾಳಿ ಬೀಸುವುದು ಮೆಲ್ಲ ನಿಲಬಹುದು.
ನದಿಯ ಜುಳುಜುಳುನಾದ ಮೌನವಾಗಲುಬಹುದು.
ಸಂಪಿಗೆಯ ಘಮವು ಮಾಯವಾಗಲುಬಹುದು.
ಕನಸಳಿದು ಸವಿ ನೆನಪುಳಿದು ಮಾಸಲು ಬಹುದು
ಮೇಲೆತ್ತು ನನ್ನೀ ಪತನದಿಂದ
ಮುತ್ತಿನ ಮಳೆಯಲ್ಲಿ ಪ್ರೀತಿ ಸುರಿಸು
ಬತ್ತಿದಾ ತುಟಿ ಮೇಲೆ ಜೇನ ಹರಿಸು
ಮಂಕಾದ ಕೆನ್ನೆಯಲಿ ರಂಗನಿರಿಸು
ತಪ್ಪಿದ ಎದೆ ತಾಳದಲಿ ಹದವನಿಡಿಸು
ಒತ್ತರಿಸು.. ಚಿತ್ತರಿಸು ಮತ್ತಗೊಳಿಸು
ಹೊಚ್ಚ ಹೊಸ ಜೀವನದ ಹೂವರಳಿಸು
ಪಿ. ಬಿ. ಶೆಲ್ಲಿಯ " ___LINK_OPEN_href="http://www.poetryfoundation.org/poem/174391" target="_blank"___Indian Serenade" ಕವನದ ಭಾವಾನುವಾದ
ಪ್ರತಿಕ್ರಿಯೆ (1)