ಮಾವು ಬೇವು ಚಿಗುರಿಸುತ
ಹೊಂಗೆ ಹೂವನರಳಿಸುತ
ಹಕ್ಕಿಗಳನು ಉಲಿಸುತ
ಮಕ್ಕಳನು ಕುಣಿಸುತ
ಹೆಣ್ಗಳನು ನಲಿಸುತ
ತರುಣರನು ತಣಿಸುತ
ಮನದ ಕಹಿಯ ಕಳೆಯುತ
ಸವಿ ಸವಿಯ ಕನಸ ಬಿತ್ತುತ
ಬೇವು ಬೆಲ್ಲ ತಿನಿಸುತ
ನವ ಕಾಮನೆಗಳ ಮೂಡಿಸುತ
ನವ ಉಡುಗೆಯ ಉಡಿಸುತ
ಮನ್ಮಥನ ಹೆಸರ ತಳೆಯುತ
ಬಂದಿತಿದೋ ‘ಶ್ರೀ ಮನ್ಮಥ’ ಉಗಾದಿ
ಯುಗ ಯುಗಗಳ ಆದಿ ಯುಗಾದಿ
ಶ್ರೀಮನ್ಮಥ ನಾಮ ಸಂವತ್ಸರದ ನವ ಯುಗಾದಿಯ ಶುಭಾಶಯಗಳನ್ನು ಕೋರುವ
ಚಿತ್ರ ಕೃಪೆ
https://www.google.co.in/search?q=
ಪ್ರತಿಕ್ರಿಯೆ (2)
ಕವನ ಸೊಗಸಾಗಿ ಮೂಡಿ ಬಂದಿದೆ ಅಂತ್ಯ ಪ್ರಾಸದದ ಬಳಕೆ ಚೆನ್ನಾಗಿದೆ, ಯುಗಾದಿ ಹಬ್ಬದ ಶುಭಾಶಯಗಳೊಂದಿಗೆ ದನ್ಯವಾದಗಳು.