ನೀ ನಿನ್ನವನಾಗಿಯೇ ಇರು ದೊರೆ

ಬೇಡ ಬೇರೆಯವರ ಅನುಕರಣೆ

ಸುಗಮವಾಗೇನು ಇರದು ನಿನ್ನ ದಾರಿ

ಗಮ್ಯ ಮರೆತು, ಸುಖಿಸು ಪಯಣ ಮರಿ

ಬೇಕಿಲ್ಲ ಪರರ ಅನುಮೋದನೆ

ಅರಿಯರು ನೀ ಪಡುವ ವೇದನೆ

ಇರುವುದು ಒಂದೇ ಒಂದು ಜೀವನ

ಮರೆಯದೆ ಜೀವೀಸು ನಿನ್ನದೇ ಜೀವನ