ತ್ರಿಭುವನ ಜನನಿ ತ್ರಿಪುರಾವಾಸಿನಿ 

ವಾಣಿ ರಮಾ ಉಮಾ ಸ್ವರೂಪಿಣಿ ||

ಅಜನ ಕೈಪಿಡಿದೆ ಅಚ್ಚ್ಯುತ ಸೋದರಿ 

ಸುಧಾಕುಂಭ ವೀಣಾಪಾಣಿ 

ವಿದ್ಯಾದಿದೇವತೆ ಶೃಂಗಪುರವಾಸೆ 

ಶಾರದೆ ಶರ್ವಾಣಿ ಸರಸ್ವತಿ ||೧||

ಸುಧಾಸಾಗರ ಸಮುದ್ಬ್ಹವೇ ಸಿರಿದೇವಿ 

ಸೌಮ್ಯರೂಪಿಣಿ ಧನಧಾನ್ಯವರ್ಧಿನಿ 

ಕೊಲ್ಲಾಪುರ ನಿವಾಸೆ ಶ್ರೀಲಕ್ಷ್ಮಿ 

ಶ್ರಿತಜನ ಪ್ರೀತೆ ಶ್ರೀಹರಿ ವಲ್ಲಭೆ ||೨||

ಗಿರಿರಾಜಸುತೆ ಗಿರಿಜೆ ಶ್ರೀಗೌರಿ 

ಶಕ್ತಿ ಸ್ವರೂಪಿಣಿ ಶ್ರಿಲಲಿತೆ

ಕೈಲಾಸಾಚಲ ವಾಸಿನಿ ಕಾತ್ಯಾಯಿನಿ 

ಪರಶಿವ ಮಾನಸ ಪ್ರಿಯಸತಿ ಪಾರ್ವತಿ ||೩||

ಅಂಬಾಸುತ