ಮನದೊಳಗೆ ಬಂದೀಗ ನೆಲೆಸಯ್ಯ ರಾಮಾ
ಮನದ ಮಾಲಿನ್ಯವನ್ನು ತೊಳೆಯಯ್ಯ ರಾಮಾ||
ಆರ್ದ್ರ ಭಾವವನಿತ್ತು ಪೊರೆಯಯ್ಯ ರಾಮಾ
ಆನಂದ ಎನಗಿತ್ತು ಸಲಹಯ್ಯ ರಾಮಾ ||
ದುರ್ಮತಿಯ ಕೆಡಹುತಾ ಬಾರಯ್ಯ ರಾಮಾ
ದುರ್ಜನರ ಸಂಘವ ಬಿಡಿಸಯ್ಯ ರಾಮಾ ||
ಸಂತಸಹವಾಸ ಯೆನಗೀಯಯ್ಯ ರಾಮಾ
ಸಂತತ ನಿನ್ನ ನಾಮ ಕೊಡಿಸಯ್ಯ ರಾಮಾ||
ಮನದ ರಾವಣನ ಸಂಹರಿಸಯ್ಯ ರಾಮಾ
ಜ್ಞಾನ ಸೀತೆಯ ಕಾಪಾಡಯ್ಯ ರಾಮಾ ||
ಸಾಹುಕಾರರ ಸೌಧದಿಂ ದೂರಿರಿಸಯ್ಯ ರಾಮ
ನಿನ್ನ ಸಹವಾಸ ಒಂದೇ ಸಾಕಯ್ಯ ರಾಮ ||
ಸಹನೆ ನೀಡುತ ಎನ್ನ ಸಲಹಯ್ಯ ರಾಮಾ
ಸದ್ಗುರುವಿನಾ ಸೇವೆ ಕೊಡಿಸಯ್ಯ ರಾಮಾ ||
ಕಾಡಿಬೇಡುವೆನಯ್ಯ ಕನಿಕರಿಸೂ ರಾಮ
ಭಕ್ತಿ ಜ್ಞಾನ ವೈರಾಗ್ಯ ನೀಡಯ್ಯ ರಾಮಾ ||
ರಾಮಾ ರಾಮಾ ರಾಮಾ ರಾಮಾ
ಶ್ರೀರಾಮ ಜಯರಾಮ ಜಯಜಯಾ ರಾಮಾ
ಶ್ರೀರಾಮ ರಘುರಾಮ ಪಟ್ಟಾಭಿರಾಮಾ ||
ಅಂಬಾಸುತ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!