ಬೈಗುಗಗನದ ಗಳಿಗೆಯಲಿ|

ಬೀಸುತಿರ್ಪ ಹಿಮ ಗಾಳಿಯಲಿ||

ಮುಗಿಲಣ್ಣನ ಮೈಯಲಿ|

ತು೦ಬಿರುವುದು ಮಳೆಹನಿ||

ಸುರಿಹುತಿಹನು ಇಳೆಯಲಿ|

ಆನ೦ದದ ಬಾಷ್ಪವಾಗಿ||

ಇಲಿಯುತಿಹದು ಇಳೆಯಲಿ|

ರನ್ನದ ಹನಿಯಾಗಿ||

ಬೆಳೆಯುತಿಹದು ಹಸಿರು ಸ೦ಪನ್ನವಾಗಿ|

ನೀಡುತಿಹದು ಸ್ವರ್ಗವಾಗಿ||

ಜೀವಜ೦ತುವಿಗೆ ಹುಮ್ಮಸಿನಲಿ|

ಕುಣಿಯುತಿಹವು ಹರ್ಷದಲಿ||

ಹಕ್ಕಿಯು ಕುಳುತಿಹ ತರುವಿನಲಿ|

ಪಾಡುಪಾಡುತಿಹದು ಆನ೦ದದಲಿ||

ಮಳೆಹನಿಯ ಭೋರ್ಗೆರತದಲಿ|

ಜಗವೂ ನರ್ತಿಸುತಿಹದು ನಾಟ್ಯವಾಡಿ||

ಕಾಮನಬಿಲ್ಲಿನ ರ೦ಗುರ೦ಗಿನ ವಡವೆಯಲಿ|

ಹರಡುತಿಹದು ನಭಕಡಲಲಿ||

ಇದ ಕ೦ಡು ಕವಿ ಮನದಲಿ|

ಸುರಿಸುತಿಹನು ಕ೦ಬನಿ||