ನಿನ್ನಯಾ ಗರ್ಭದಿ ಸಂಜಾತಶಿಶುವು ನಾನು

ನವಮಾಸಗಳ ಹೊತ್ತೆನ್ನ ಬೆಳೆಸಿದೆ  ನೀನು  

ನಿನ್ನುಸಿರಲಿ ಭಾಗವ ಪಡೆದುಸಿರಿಸಿದೆ ನಾನು   

ನಾನತ್ತ ಮೊದಲದಿನದಿ ಬರದಪ್ಪಿನಕ್ಕೆ ನೀನು  ||1||

ನಿನ್ನಕ್ಕರೆಯ ಅಮೃತದ ಸವಿಯನುಂಡೆ ನಾನು

ಅಮೃತದಾ ಕಳಸವ ಸದಾತುಂಬಿರಿಸಿದೆ ನೀನು

'ಅಮ್ಮ'ಯೆಂದೊಡೆ ಸ್ವರ್ಗಾದಪೀಗರೀಯಸಿಯ ಕಂಡೆ ನಾನು

ಸುವಿಶಾಲತೆಯ ಆಳವರಿಯದ  ಮಮತಾಸಾಗರವು ನೀನು ||2||

  

ರಂಕನಾದರೂ   ರಾಜನಾದರೂ  ನಿನ್ನಮಗನೇ  ನಾನು

ಸದಾ ಮಾತೃಛಾಯೆಯೊಂದ ನನಗೀಯುತಿರು ನೀನು

ದೈವಕೃಪದಿ ನನ್ನೀಜನ್ಮದಿ ನಿನ್ನಮಗುವಾಗಿಹೆ ನಾನು

ನೂರೂಜನ್ಮಕೂ ನನ್ನಮ್ಮನಾಗಿ ಧರೆಗಿಳಿಯಮ್ಮ ನೀನು ||3||

© ರಾಘವ ಹರಿವಾಣಂ