ನಿನ್ನ ಕಂಡೊಡನೆ ಅಂದು,

ಮನದಲಿ ಮೂಡಿತೊಂದು ಚಿಗುರು

ಅಂದೇ ಮೊದಲು ನಿಂತದ್ದು,

ನಾ ಕನ್ನಡಿಯ ಎದುರು!!!!!

ನಿನ್ನ ಕಂಗಳೇ ಹೇಳುತಿವೆ,

ಪ್ರೀತಿ-ಪ್ರೇಮದ ಪಾಠ

ಸೋಲದಿರಲು ಸಾಧ್ಯವೇ,

ಕಂಡು ನಿನ್ನ ಕಣ್ಣಂಚಿನ ನೋಟ

ನೀನು ನಗುವಾಗ ನಿನ್ನ ಗುಳಿಕೆನ್ನೆಯ

ಮಂದಹಾಸದ ಆಟ!

ಕೆಡಿಸಿ ಕೆಡಿಸಿ ನನ್ನ ತಲೆಯ,

ಹೇಳುತಿದೆ ಒಲವ ಮೊದಲ ಪಾಠ!!

ಹೇಳುತಾರೆ ಪ್ರೀತಿಗೆ ಪಾಠಶಾಲೆಯಿಲ್ಲ್ಲ

ಶಾಲೆಯೆತಕೆ ನಲ್ಲೆ, ನಿನ್ನ ಮಾತಿದೆಯಲ್ಲ,

ಮುತ್ತಿನಂತೆ ಸುರಿವ ನಿನ್ನ ಪದಗುಚ್ಛಗಳೆಲ್ಲ,

ಮರೆಸುತಿವೆ ಬದುಕಿನ ಇಲ್ಲ-ಸಲ್ಲಗಳೆಲ್ಲ!!

ರಸಿಕತೆಯ ಯಾರು ಕಲಿಸುವುದಿಲ್ಲ

ನಿನ್ನ ನಡುವೆ ನನಗೆಲ್ಲ ಕಲಿಸಿದೆಯಲ್ಲ!!

ಅದರ ಅಂದವ ನಾನಿಲ್ಲಿ ಹೊಗಳುವುದಿಲ್ಲ

ಇದರ ಬಗ್ಗೆ ಬೇರೆಯವರು ತಿಳಿಯುವುದು,

ನಂಗೆ ಇಷ್ಟಾನೆ ಇಲ್ಲ!!!!!!!!

ನಿನ್ನ ಅಂದವ ಹೊಗಳುತ್ತಾ ಕೂತರೆ

ಜೀವನ ಪುರ್ತಿ ಮುಗಿಯುವುದೇ ಇಲ್ಲ,

ಸಾಕು ಸಾಕು!! ಮಲಗೋಣ ಬಾರೆ

ತುಂಬಾ ಕತ್ತಲಾಯಿತಲ್ಲ!!!!!!!!!!!!