ತೋಟದಲ್ಲಿರುವ ಹೂವುಗಳೆಲ್ಲಾ ಬಾಡಿವೆಯಲ್ಲಾ?
ತೋಟದೊಡತಿಯ ವಿರಹದ ಬಿಸಿ ಅವಕ್ಕೂ ತಾಗಿರಬೇಕು ಬಿಡು,
ಕೊಳದಲ್ಲಿರುವ ಹಂಸಗಳು ತಮ್ಮ ನಡಿಗೆಯನ್ನು ನಿಲ್ಲಿಸಿವೆಯಲ್ಲಾ?
ಒಡತಿಯ ಏಕಾಂತಕ್ಕೆ ಭಂಗ ತರಬಾರದೆಂಬ ಕಾಳಜಿಯಷ್ಟೇ ಬಿಡು,
ಭೂಮಿಯೇಕೋ ವರುಣನ ಆಗಮನಕ್ಕೆ ಕಾದು ಕುಳಿತಂತಿದೆಯಲ್ಲಾ?
ನಮ್ಮೊಡತಿಯ ಕಾಯುವಿಕೆಗೊಬ್ಬ ಜೊತೆಗಾರ್ತಿ ಸಿಕ್ಕಳು ಬಿಡು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!