ಮನಸ್ಸಿನ ಒಳಗೆ ಮೋಡದ ಗೋಡೆ

ಅರಿವಿನ ಬರದಲಿ ಬಿಡುವರು ಬುರುಡೆ

ಹಸಿವನ್ನು ತಿಳಿಯದೆ ಉ೦ಡ ಭೊಗಿ

ಜಗವನು ಮರೆತು ಆದೆ ಜೊಗಿ

ದುಡಿಮೆ ದುಡ್ಡು ಸಾಲದೆ ಹೊಗಿ

ದಿನವೂ ಉ೦ಡೆನಾ ಅ೦ಬಲಿ ಗೋದಿ

ಹರುಷಕೆ ಹೊದಿಸಿದ ಅ೦ಬರ ಬೂದಿ

ಜಗವನು ಮರೆತು ಆದೆ ಜೊಗಿ

ಕೇಸರಿ ಬಟ್ಟೆ ಬರಿಮೈ ಮೇಲೆ

ಆಡಿಸಿ ಕೈ ಹೊಟ್ಟೆ ಮೆಲೆ

ಅಯ್ಯ, ಅಮ್ಮ ಕಥೆಯ ಕೇಳಿ

ದಿನವೂ ದಣಿದೆ ಭಿಕ್ಷೆಯ ಬೇಡಿ

ಜಗವನು ಮರೆತು ಆದೆ ಜೊಗಿ

ಶಿಸ್ತಿನ ಮಾತು ಕಹಿ ಕಹಿ

ಸುಳ್ಳಿನ ಸಕ್ಕರೆ ಸಿಹಿ ಸಿಹಿ

ನ೦ಬಿದ ವಚನ ಹಾಡಿದೆ ಸಾಗಿ

ಜಗವನು ಮರೆತು ಆದೆ ಜೊಗಿ

ಸಥ್ಯದ ಅರ್ಥಕೆ ಹಾಡಿದೆ ವಚನ

ಸಭೆಯು ಆಯಿತಿ ಕಾಲಿ ವನ

ಮಿಥ್ಯವ ಹಾಡಿದೆ ದಿನವೂ ಕವನ

ಕುಣಿದು ಹಾಡಿತು ಭಕ್ತ ಜನ

ಜಗವನು ಮರೆತು ಆದೆ ಜೊಗಿ

---ವಿದ್ಯಾಧರ