ಆ ದಿವ್ಯ ಬೆಳಕಲಿ ನಾ ಕ೦ಡೆ ಕನಸು

        ಯುಗವೆಲ್ಲ ಕಾದೆನು ಆಗಲದು ನನಸು

        ಪರಿಶುದ್ಧ ಪರಿಶೊಧನೆ,ಜೀವನ ಯಾತ್ರೆ,

        ನ೦ಬಿದರೆ ಇದೊ೦ದು ದಿನವು ಜಾತ್ರೆ

        ಈ ಲೊಕ ಈ ಬಾಳು ಶಾಶ್ವತವಲ್ಲ,

        ಇದರೊಡೆಯ ರಹಸ್ಯ ಅವನಶ್ಟೆ ಬಲ್ಲ

        ಈ ಕೋಪ ಈ ದ್ವೆಶ ಎಲ್ಲಾವು ವ್ಯರ್ಥ

        ಭಾವನೆಗಳ ಅ೦ದೊಲನದಲ್ಲಿ ಯೆನಿಲ್ಲ ಅರ್ಥ

        ಈ ಬಾಳು ಅಸ್ತಿತ್ವ ಇದೊ೦ದು ಪಾತ್ರ

        ಆಡಿಸುವವನು ಏಲ್ಲರನ್ನು ಅವನಶ್ಟೆ ಮಾತ್ರ

        ಈ ರಚನೆ ಮಾನವ ಮೀರಿದೆ ಕಲ್ಪನೆ

        ಅದರಲ್ಲಿ ಹುಡುಕುವನು ಸ೦ತೊಷ ಸ್ವಲ್ಪನೆ

        ನಾ ಮೇಲು, ನೀ ಕೀಳು ಎನ್ನುವವನು ಮೂಢ

        ಕೊನೆಯಲ್ಲಿ ಸೇರುವವರು ದೇವರ ಕೂಡ

        ಏರಡು ದಿನ ಬಾಳಲ್ಲಿ ಏಕೆ ಈ ಜಗಳ

        ಹಾಡು ನೀ ದಿನವು ಪ್ರೀತಿಯ ತಾಳ

        ಹಾಡು ನೀ ದಿನವು ಪ್ರೀತಿಯ ತಾಳ

                -ವಿದ್ಯಾಧರ