ಉತ್ಸಾಹದಲ್ಲಿ ಚಿತ್ತಕ್ಕೆ ಅರಿವಿನ ಹಂಗಿಲ್ಲ

ತೋಚಿದ್ದೆಲ್ಲ ಮಾಡಿಬಿಡಬೇಕೆನ್ನುವ

ಒಣ ಧೈಯ೯ದಲ್ಲಿ ಮುನ್ನುಗ್ಗಿಬಿಡುತ್ತದೆ

ನಾಳೆಯ ಆಗು ಹೋಗುಗಳ ಮರೆತು.

 

ಸಂತೋಷದ ಕ್ಷಣಗಳು ಎದುರಾದಾಗ

ಮೈ ಮನವೆಲ್ಲ ನವಚೇತನ ತುಂಬಿ 

ಬದುಕು ಎಷ್ಟು ಸುಂದರ ಸ್ವಗ೯ ಸುಃಖ  

ಅಂಗೈಯ್ಯಲ್ಲೇ ಆಕಾಶ ಇರುವಂತೆ.

 

ಅಹಂಕಾರ ಹೆಡೆಯೆತ್ತಿ ಆಡಿಸುತ್ತದೆ

ನಡೆದು ಬಂದ ದಾರಿ ಹಿಂತಿರುಗಿ ನೋಡದೆ

ಸಾಧಿಸಿ ಬಿಡುವೆನೆಂಬ ಒಣ ಜಂಬದಲ್ಲಿ

ಇದೊಂದು ಭ್ರಮಾ ಲೋಕ ಎಂಬುದನ್ನು ಮರೆತು.

 

ಚಿಂತೆಯಲ್ಲಿ ಹೃದಯ ಒದ್ದಾಡುತ್ತದೆ

ಸಮಸ್ಯೆಗಳಿಗೆ ಹೇಗೆ ಪರಿಹಾರ ಹುಡುಕಲಿ

ಮುಂಬರುವ ದಿನಗಳ ಯೋಚನೆಯಲ್ಲಿ

ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟವರಂತೆ.

 

ಕರುಳು ಕೂಗುತ್ತದೆ ತನ್ನೊಡಲ ಬಳ್ಳಿಗೊಂದು

ಪರಿಪೂಣ೯ ಬಾಳು ದಯಪಾಲಿಸೆಂದು

ಪಕ್ಕದಲ್ಲೆಲ್ಲೂ ಕರಿ ನೆರಳು ಹಾಯದಿರಲೆಂದು

ಕಾಗೆಯ ಗೂಡಲ್ಲಿ ಕೋಗಿಲೆ ಮೊಟ್ಟೆ ಇಟ್ಟಂತೆ.

 

ಕಲ್ಪನೆಗೂ ಮೀರಿ ವಿದ್ರಾಹಕ ಘಟನೆಗಳು

ಘಟಿಸಿದಲ್ಲಿ ಅವಮಾನ, ಸಿಟ್ಟು,ಕೋಪ, ಸಂಕಟ, 

ಅಸಹಾಯಕತೆ ಸಹಿಸಲಾರದೆ ನಖಶಿಖಾಂತ

ಕೊತ ಕೊತ ಕುದಿಯುವ ಬೆಲ್ಲದ ಕೊಪ್ಪರಿಗೆಯಂತೆ.

 

ದುಃಖದಲ್ಲಿ ಅಳುವಾಗ ಏನುಂಟು ಬಾಳಲ್ಲಿ

ಎಲವೂ ಕ್ಷಣಿಕ ಬದುಕೇ ಸಾಕೆಂಬ ಹತಾಷೆಯಲ್ಲಿ

ಮನವು ಮುದುಡುತ್ತದೆ ಇಹಲೋಕ ಸಾಕೆಂದು

ಭೂಮಿಗೆ ಭಾರ, ಕೂಳಿಗೆ ದಂಡ ಎಂಬಂತೆ.

 

ಬದುಕೆಂಬುದು ಒಂದು ಮಾಯಾ ಪಾಶ

ಇಲ್ಲಿ ಸಿಲುಕಿ ಕೊಳ್ಳದಿರುವವರು ಯಾರೂ ಇಲ್ಲ

ಅನುಭವ ಕೊನೆಯಲ್ಲಿ ಅನಿಸುವುದೊಮ್ಮೆ

ಬಾಳೊಂದು ತಿರುಕನ ಕನಸಿನಂತೆ.

 

ಹುಟ್ಟು ಬೃಹ್ಮನ ಸೃಷ್ಟಿ

ಸಾವು ಕಾಲ ನಿಣ೯ಯ

ಮದ್ಯ ಬರುವ ವಿಧಿಯಾಟದ ತಾಳಕ್ಕೆ

ಕುಣಿಯುವ ಬಲಿ ಪಶು ನಾವು!