ಜಗವ ಸುತ್ತಿ ಬಂದವಳ

ಅಗಳ ಅನ್ನದ ಅಗತ್ಯಕೆ

ಇರುಳ ಬದುಕು ಬಯಸಿ

ಕತ್ತಲಲ್ಲಿ ಬೆತ್ತಲಾಗುವ

ಬೆರೆತು ಬೆಂಡಾಗುವ

ಆದ್ರತೆಯ ಬದುಕು

ಅದಿನ್ನೂ ಆರಂಭಿಕ ,

ಸೆರಗು ಜಾರಿಸಿ

ನೂವ್ವ ಸಹಿಸಿ

ಸಾಂಗತ್ಯದ ಸುಖವನುಣ್ಣುವ

ಬದುಕಿನ ಮೇಲಾಟಕೆ

ಅಗತ್ಯತೆಯ

ಆರ್ಭಟ ಆಟಾಟೋಪದ

ಭುಂಜಕ ,

ಕತ್ತಲೆಯ ಕೂಪದೊಳು

ಮೆತ್ತನೆಯ ಹಾಸಿಗೆಯೊಳು

ಕನಲುವ ಸ್ವರ ಹಸಿವಿನದಾಗಿದ್ದರೆ ,

ಕಿಟಕಿಯ ಕಿಂಡಿಯಲಿ

ತೂರಿ ಬರುವ ಬೆಳಕು

ಹಸಿದ ಕಂದಮ್ಮನ

ಭವಿಷ್ಯದ ಹಾರೈಕೆಯದು

ಇನ್ನುಳಿದದ್ದು ಮತ್ತದೇ ಕತ್ತಲು

ಕತ್ತಲಿಗಾಗಿ ಕಾಯುತಿರುವ ಬೆತ್ತಲು . . . . . ,