ಬಾಳಿನ ಚಕ್ರದಲಿ ಬದುಕಿನ ಬವನೆಯಲಿ 

ನಲುಗಿದೆ ಈ ಮನಸು ಕರಗಿದೆ ನನ್ನ ಕನಸು

ಬದುಕುವಾ ಆಸೆ ಹೊತ್ತು ನಡೆದೆ ನಾ ಪ್ರತಿ ಹೆಜ್ಜೆ 

ಗೆಜ್ಜೆ ಕಟ್ಟಿದಾ ನವಿಲಂತೆ ಕುಣಿಯುತಾ

ಪ್ರೀತಿಯ ಮಹಲಿನಲಿ ಕನಸಿನ ಅಮಲಿನಲಿ 

ಕನಸಿನಾ ಕಟ್ಟೆಯೊಡೆದು ನಿಜದ ಅನಾವರನದಲಿ 

ನನ್ನ ನಾ ಕಾಣದಾದೆ ಅಷ್ಟೂ ದಿನದ ಆ ಸೋಲಿನಲ್ಲಿ 

ನನ್ನ ಹುಡುಕಾಟದ ಪ್ರಾರಂಭ 

ಶುರುವಾಯ್ತು ಇಲ್ಲಿಂದ ಜೀವನದ ನಿಜ ಆರಂಭ 

ಬಯಸಿದ್ದು ಪಡೆವ ಭರದಲ್ಲಿ ಬಯಸದೇಬಂದ ಕಷ್ಟಗಳ ಅನುಭವಿಸಿ

ಪಕ್ವವಾಗಿದೆ ಮನಸು ಬಯಸದೇ ಬಂದದ್ದನ್ನು ನಿರಾಕರಿಸುವ ಹಂತದಲಿ 

ಮತ್ತೊಂದು ಕನಸು ಬದುಕುವ ಆಸೆ ಚಿಗುರಿಸಿ

ಉಳಿಸಿದೆ ನನ್ನನ್ನು 

ನನ್ನದೊಂದು ಸಲಾಮು ಈ ಬದುಕಿಗೆ ಈ ಕನಸಿಗೆ 

ನನ್ನ ನನ್ನೊಂದಿಗೆ ಸೇರಿಸಿದ್ದಕ್ಕೆ 

ನನ್ನ ನನ್ನೊಂದಿಗೆ ಉಳಿಸಿದ್ದಕ್ಕೆ ....!!