ಕನಸು

ನಸು ನಗುತ ಕಂಡ ಕನಸು

ರಾತ್ರಿ ಸವಿನಿದ್ರೆಯ ಕನಸು

ಮನಸ ಮನಸು ಸೇರುವ ಕನಸು

ಕನಸಿನರಮನೆಯ ಕಟ್ಟುವ ಮನಸು.....

 

ನಿನ್ನ ಕನಸಿನಲಿ ನನ್ನ ಕಣುವ ಕನಸು

ನಿನ್ನ ಉಸಿರಿನಲಿ ಲೀನವಾಗುವ ಮನಸು....

 

ಕನಸಿನಲಿ ಬೇಡುವೆ ನಿನ್ನ ಮುಗ್ಧ ಮನಸು

ನನಸಿನಲಿ ಹಾರೈಸುವೆ

ಕನಸಾಗದೇ ಉಳಿಯಲಿ ನಿನ್ನ ಕನಸು, ಎಂದೆಂದೂ..

 

ನನಸಾಗದೇ ಇರುವುದೇ ಕನಸು...??...!!

ನನಸಾಗಲೀ ಎನ್ನುವುದೇ ಜೀವನದ ಕನಸು....

 

ಕನಸು ಕಣುವುದೇಕನಸು ನನಗಾಗ

ರಾತ್ರಿಯಲಿ ಜಾಗರಣೆ,ಬೆಳಗಿನಲಿ ಬವಣೆ

ಕನಸು ಕಣುವುದೇ ಜೀವನ ನನಗೀಗ

ಕನಸಿನಿಂದಲೇ ಬಾಳು,

ನನಸಾಗಿಸುವುದೇ ಈ ಬದುಕು....

ನೀನಿಲ್ಲದೇ ಕನಸಿಲ್ಲ....!

ಕನಸಿಲ್ಲದೇ ಬಾಳಿಲ್ಲ...!

ನನ್ನ ಕನಸು ಕಟ್ಟಿಕೊಟ್ಟವನ ಜೀವನ ಹಸನಾಗಲೀ

ಎಂಬುದೇ ಈ ಕನಸುಗಾತಿಯ ಕನಸು...........