ಮತ್ತೆ ಮತ್ತೆ ನೆನಪಾಗಬೇಡ ಗೆಳತಿ

ನೆನಪ ನೆಪಮಾಡಿ ಮನಸಿನೊಳಗೆ ಬರಬೇಡ ದಯಾಮಾಡಿ

ಒಮ್ಮೆ ಒಳಬಂದರೆ ನೀ ಹೋರಬಿಡದು ನಿನ್ನ

ತನ್ನ ಪ್ರಾಣವ ಬಿಟ್ಟರು ಈ ಹೃದಯ  

ಹಾಗಾಗಿ ಯೋಚಿಸು ಒಳ ಬರುವ ಮುನ್ನ

ಕಾಡದಿರಲಿ ಬೇರಾವುದೇ ಮೌನ ….

 

ಅರಳಿದ ವದನದಿ ನಲಿವ ಆ ನಯನದಲಿ,

ಮನಸಿನಂತರಾಳವಾ ಕೆಣಕುವ ಕಿರುನಗುವಿನಲಿ,

ಸೆರೆಹಿಡಿದಿರುವೆ ನನ್ನ.

ಕವಿ ಕಲ್ಪನೆಗೆ ನಿಲುಕದ ಕಾವ್ಯ ಕನ್ನಿಕೆ,

ಹೇಗೆ ಕಳೆಯಲಿ ನೀ ನಿರದ  ಈ ಏಕಾಂತವನ್ನ .....

 

ಮುಂಜಾನೆಯಾ ಕಲರವವ,

ಮುಸ್ಸಂಜೆಯ ಸಂಭ್ರಮವ,

ನಿನ್ನ ಕೈ ಕಿರಿಬೆರಳ ಹಿಡಿದು ನಡೆದು ಅನುಭವಿಸುವಾಸೆ

ನೆರವೇರಿಸುವೆಯ ಓ ನನ್ನ ಉಸಿರೇ

ಕೊನೆಯುಸಿರಿರೋವರೆಗೆ ನಿನ್ನುಸಿರಲಿ ಉಸಿರಾಗುವಾಸೆ .....

 

 ನವೀನ್ ಪಿ ಗೌಡ