ನಾನವತರಿಸಿ ನಿಮಗೆ ಖುಷಿಯ ಕೊಟ್ಟೆ

ನಾ ಕುಡಿವ ಹಾಲ ನಿಮಗೆ ಬಿಟ್ಟೆ

ಜಿಗಿಜಿಗಿದು ಬಂದು ಮುತ್ತನಿಟ್ಟೆ

ನಾ ಕೊಟ್ಟೆ ನಿಮಗೆ ಪ್ರೀತಿ ಮೂಟೆ

 

 

ನಾ ಕೊಟ್ಟ ಗೋಮೂತ್ರ ನಿಮಗುಪಯುಕ್ತ

ನಾನಿಟ್ಟ ಸಗಣಿ ಅದು ವಿಷಮುಕ್ತ

ಹಾಲ ಕೊಟ್ಟಿರುವೆ ಬಾಳ ಪರ್ಯಂತ

ಆರೋಗ್ಯದಿ ಮಾಡಿರುವೆ ನಿಮ್ಮ ಶ್ರೀಮಂತ 

 

 

ಮತ್ತೀಗ ಕಡು ಬೇಸಿಗೆ ಬಂದಿದೆ

ಬರಗಾಲ ಕಣ್ಣೆದುರು ನಿಂದಿದೆ

ತಿನ್ನಲೇನೂ ಇಲ್ಲದಂತಾಗಿದೆ

ಹಲವು ಸ್ನೇಹಿತರ ಪ್ರಾಣವೇ ಹೋಗಿದೆ

 

 

ನಾ ಕಟುಕರ ಪಾಲಾಗುತಿಹೆನು

ಕುತ್ತಿಗೆ ಕಡಿದು ರಕ್ತ ಹರಿಸುವನು

ಕರುಳ ಹರಿದು ನೋವ ಮಾಡುವನು

ನನಗಿರುವ ಬೆಲೆ ಇಷ್ಟೇಯೇನು?

 

 

ದೇವರೆಂದಲ್ಲದಿದ್ದರೂ ಬಿಡಿ

ಒರ್ವ ಜೀವಿಯೆಂದು ನೋಡಿ

ತಿನ್ನಲೊಂದಿಷ್ಟು ಮೇವ ಕೊಡಿ

ನನಗೆ ಪ್ರಾಣಭಿಕ್ಷೆ ನೀಡಿ!

 

 

- ಸಚಿನ್.ಎಲ್.ಎಸ್