~~~~~~ಗಜ್ಹಲ್~~~~~~~
ಹೃದಯ ನೋವಿನ ಕಣ್ಣೀರು ಮನದ ಕಣಿವೆಗೆ ಜಾರುತಲಿತ್ತು
ಒಲವಿನ ಹುಡುಗಿಯ ನೆನಪೆಂಬ ಕೆನ್ನಾಲಿಗೆ ಚಾಚಿ ಹಿರುತಲಿತ್ತು
ಬದುಕದು ಮೌನ ಅದರೊಳಗಿನ ಕದನಕೆ ಕರೆಯುತಲಿತ್ತು
ಯುದ್ಧದ ಬೀತಿಯು ಅವಳದೆ ನೀತಿಯೋ ಮನ ಅರಿಯದೆ ಹೋಯ್ತು
ಒಲವಿನ ಕಳೆಬರಹ ಮನದ ಕಡಲಿನ ಅಲೆಯಲಿ ತೆಲುತಲಿತ್ತು
ಹೊದವಳ ನೆನಪಿನ ಜ್ವಾಲೆ ಬಡವನ ಗುಡಿಸಲನು ಸುಡುತಲಿತ್ತು
ಕರೆಯದೆ ಬಂದಳು ಹೇಳದೆ ಹೋದಳು ಹೃದಯವೊಂದೆ ಅಳುತ ಕುಳಿತಿತ್ತು
ಅವಳೊಗುವ ಘಳಿಗೆಯಲಿ ಬಡವನ ಗುಡಿಸಲಿಗೆ ಸಿಡಿಲು ಬಡಿದಿತ್ತು
ಒಲವಿನ ಮಳೆ ಪನ್ನಿರಿನ ಹೊಳೆ ಸುರುಸುವೆನೆಂದು ಆ ಹಕ್ಕಿ ಬಂದಿತ್ತು
ಬದುಕಿನ ರಮ್ಯೋದ್ಯಾನದಲಿ ಅರಳಿದ ಹೂ ಪಗಳೆಗಳ ಕುಕ್ಕಿ ಕುಕ್ಕಿ ಹೊರಟಿತ್ತು
ಹೃದಯದಿಂದ ಹೃದಯಕೆ ಸಾಗುವ ಹಕ್ಕಿಗೆ ನನ್ನೆದೆ ಬಯಲೆ ಬೇಕಿತ್ತೆ?
ಹೋಗುವುದೊಗುವೇ ಹೃದಯ ಕದವನು ಜಡಿದೊಗು ಮತ್ತಾರು ಸುಳಿಯದಂತೆ..,
-ಸಿದ್ದಯಾದವ್ ಚಿರಿಬಿ...,
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!