"ರಾಧೆಯ ಮನವನು ಬಲ್ಲನು ಕೃಷ್ಣನು"

ರಾಧೆಯ ಮನವನು ಬಲ್ಲನು ಕೃಷ್ಣನು

ಅವಳೆದೆ ಬೃಂದಾವನದಲಿ ನಲಿಯುತಿಹನು

ಮೋಹನ ಮುರಳಿಯ ಕೊಳಲಿನಲೂಲಿತವು

ಕರೆದಿದೆ ನಲ್ಲೆಯ ಒಲುಮೆಯ ನಲ್ಮೆಗೆ

ಬೃಂದಾವನದ ಪ್ರೀತಿಯ ಚಿಲ್ಮೆಗೆ

ಬಾಚಿದ ರಾಧೆಯ ನಗುವಿನ ಮಲ್ಲಿಗೆ

ತಾರೆಯ ಜೊತೆಯಲಿ ಬೆರೆಸಿದ ಮೆಲ್ಲಗೆ

ಒಲವಿನ ಮಾಲೆಯ ಮಾಡುತ ಕೊರಳಿಗೆ

ಮುಡಿಸಿದ ಒಲ್ಮೆಯ ತುರುಬಿನ ನೆರಳಿಗೆ

ರಾಧೆಯ ಹೃದಯದಿ ನೆಲಸಿದ ಮೆಲ್ಲಗೆ

ಯಮುನಾ ತೀರದಿ ತೊಟ್ಟಿಲು ಕಟ್ಟುತ

ಅಲೆಗಳ ರೀತಿಯ ಒಲವನು ತೋಗುತ 

ಅದರೊಳು ರಾಧೆಯ ಪ್ರೀತಿಯ ಬೆರಸುತ

ನಲ್ಲೆಯ ತುಟಿಯಲಿ ಜೇನನು ಹಿರುತ

ಬಾಚಿದ ಲೋಲಾ ಮುಕುಂದ ಮುರಾರಿ

ಬಾನಂಗಳದಿ ರಾಧೆಯ ಜೊತೆ ಸಾಗಿದ

ಚಂದಿರ ವದನ ಮೋಹಕ ಮದನ

ತಾರೆಗಳಂಗಳದಲಿ ಸಲುಗೆಯಲಿರಲು

ನಾಚಿದಳು ರಾಧೆ ಗೋಪಾಲನ ಕೈಯೋಳು

ಕೃಷ್ಣನು ಬೀಸಿದ ಪ್ರೇಮದ ಮೈಯೋಳು

ಅರಿತನು ಅವಳೆದೆ ಒಲವಿನ ಕದನ

ಹೇಳದೆ ಉಳಿದ ಮೋಹಕ ಕವನ

ಬಳಸಿದ ಬಾಚಿದ ನಲ್ಲೆಯ ಮನವ

ಅವಳೆದೆ ಒಲವಿನ ನಲ್ಮೆಯ ಚುಂಬನವ

ಲೋಕದ ಕಣ್ಣಿಗೆ ಸುಂದರ ಕಥನ

ಪ್ರೇಮೊತ್ಸವದ ಮಧುರ ಮಂಥನ...,

-ಸಿದ್ದುಯಾದವ್ ಚಿರಿಬಿ...,