ನಾ ಬಹಳ ಗಾಢ ನಿದ್ದೆಯಲ್ಲಿದ್ದೆ
ಸುಂದರ ಕನಸೊಂದ ಕಾಣುತಲಿದ್ದೆ
ಜಗತ್ತೇ ಇಲ್ಲವೆಂಬಂತೆ ಮಲಗಿದ್ದೆ
'ಆ ಶಬ್ದ' ಕೇಳಿ ದಢಾರನೆ ಎದ್ದಿದ್ದೆ
ಫ್ಯಾನು ಗಿರ ಗಿರ ತಿರುಗುತ್ತಿತ್ತು
ಕಿಟಕಿಯಿಂದ ಬಿಸಿ ಗಾಳಿ ಬೀಸಿತ್ತು
ಆಕಾಶ ಪೂರ್ಣ ಖಾಲಿಯಾಗಿತ್ತು
'ಆ ಶಬ್ದ' ನನ್ನನ್ನೆಚ್ಚರಿಸಿತ್ತು
ನಿಧಾನವಾಗಿ ನಾನೆದ್ದು ಕುಂತೆ
ಮೆಲ್ಲನೆ ಸದ್ದು ಮಾಡದೆ ನಿಂತೆ
'ಶಬ್ದ' ಕೇಳಿತು ಭಯವಾಗುವಂತೆ
ಅಂಕುರಿಸಿತ್ತು ಆತಂಕ-ಚಿಂತೆ
ಸ್ನೇಹಿತನ ರೂಮಿನೆಡೆ ನಾ ನೆಡೆದೆ
ಪುನಃ 'ಆ ಘೋರ ಶಬ್ದ' ಕೇಳಿದೆ
'ಶಬ್ದ' ಕೇಳಿ ರೂಮಿನೆಡೆ ಓಡಿದೆ
ಅಲ್ಲಿ 'ಘೋರ ಗೊರಕೆ' ನೋಡಿದೆ
ಅವನ ಗೊರಕೆಗೆ ನಾನೆದ್ದಿದ್ದೆ
ಆ ಶಬ್ದಕ್ಕೇ ಆತಂಕಗೊಂಡಿದ್ದೆ
ನನ್ನ ಮೂರ್ಖತನಕ್ಕೆ ನಕ್ಕಿದ್ದೆ
ಅವನ ಗೊರಕೆಗೆ ಕೈ ಮುಗಿದಿದ್ದೆ
'ಆ ಶಬ್ದ'
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!