ಬಾನಂಗಳದಿ ಮೆರೆವ ಸೂರ್ಯ ಚಂದ್ರರು
ನಮಗದೋ ಹೊಂದಾಣಿಕೆಯ ಪಾಠಕರು
ಬೆಳಕನ್ನು ಸ್ವತ್ತೆಂದು ತಿಳಿಯದೆ, ಸೂರ್ಯನು
ಚಂದ್ರನಿಗದ ಕೊಟ್ಟು ಮುಳುಗುವ
ಪಡೆವುದು ಘನತೆಗೆ ಕುತ್ತೆಂದೆಣಿಸದೆ, ಚಂದ್ರನು
ಸೃಷ್ಠಿಯ ಒಳಿತಿಗೆ ಬೆಳದಿಂಗಳ ಹರಿಸುವ
ನಾನು ನನ್ನದೆಂಬ ಭಾವವಿಕಾರದಿ
ಮುಳುಗಿರುವ ಈ ಜಗದೊಳು
ನಾವು ನಮ್ಮದೆಂಬ ಭಾವಸೃಷ್ಟಿಯು
ತೋರ್ವುದು ಸೂರ್ಯ ಚಂದ್ರರೊಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!