ಈ ಹಾಡನ್ನು ನಾನು ಬಹಳ ವರ್ಷಗಳ ಹಿಂದೆ ವಿವಿಧ ಭಾರತಿಯಲ್ಲಿ ಕೇಳುತ್ತಿದ್ದೆ. ಬಹಳ ಮಧುರವಾದ ಹಾಡು.
ನಿಜವಾದ ಭಕ್ತನಿಗೆ ಇರಬೇಕಾದ ಸೌಮ್ಯತೆ, ದೈನ್ಯತೆ, ಮುಗ್ಧತೆ, ವಿನಮ್ರತೆ ಎಲ್ಲವೂ ಇಲ್ಲಿ ಎದ್ದು ಕಾಣುತ್ತದೆ. ಮುಖೇಶ್ ಅವರ ಮಧುರವಾದ ಧ್ವನಿಯಲ್ಲೂ ಇವು ಪ್ರತಿಧ್ವನಿತ ವಾಗಿದೆ. ಅವರು ಹೇಳಿರುವ ಧಾಟಿಯಲ್ಲೇ ಈ ಕನ್ನಡ ಕವನವನ್ನೂ ಹೇಳಬಹುದು.
ಭಕ್ತನ ಭಜನೆ
ಮುಖೇಶ್ ಅವರು ಹಾಡಿರುವ 'ಸುರ್ ಕೀ ಗತಿ ಮೈ ಕ್ಯಾ ಜಾನೂ ' ಎಂಬ ಭಕ್ತಿ ಗೀತೆಯ ಭಾವಾನುವಾದ
ಸ್ವರಗಳ ಜ್ಞಾನ ನನಗಿಲ್ಲಾ
ರಾಗದ ಪರಿಚಯ ಎನಗಿಲ್ಲಾ
ಭಜಿಪುದು ಬಿಟ್ಟರೆ ಬೇರಿಲ್ಲಾ
ನಾಮದ ಸ್ಮರಣೆಯೆ ನನಗೆಲ್ಲಾ
ಭಜನೆಯ ಸತ್ವವು ಎಷ್ಟಿದೆ ಏನೋ
ಸ್ವಲ್ಪವು ನನಗೆ ತಿಳಿದಿಲ್ಲ
ಹಾಡಲಿ ನಿನ್ನಯ ಭಕ್ತಿಯ ತುಂಬಿದ
ನಾಮದ ಸ್ಮರಣೆಯೆ ಸಾಕೆನಗೆ
ಭಕ್ತಿಯ ಭಜನೆಯೆ ಸಾಕೆನಗೆ
ದೇವನು ಎಲ್ಲರ ಸಲಹುವುದಾದರೆ
ಭಜನೆಯು ಏತಕೆ ಎನ್ನುವರು
ಅಮ್ಮನ ಸ್ಥಾನದಿ ನೀನಿರುವಾಗ
ಇವುಗಳ ಗೊಡವೆಯು ನನಗೇಕೆ
ಭಜನೆಯೆ ಒಡವೆ ಉಡುಗೊರೆಯು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!