ಒಲುಮೆ ತುಂಬಿದ ಕಂಗಳಲ್ಲಿ
ಕನಸಿನ ಕವಿತೆಯನು
ಹೃದಯದಲಿ ಕೆತ್ತಿಸಿ
ಭಗ್ನಪ್ರೇಮಿಯಂತೆ
ನಿನಗಾಗಿ ಕಾದಿರುವೆನು!
ಪ್ರೀತಿ ಎಂಬ ಸಾಗರದಲಿ
ನಿನ್ನ ನೆನಪಿನ ದೋಣಿಯಲಿ
ಮುಳುಗಿಯೂ ತೇಲಲಾಗದ
ನಡುವಿನ ಪ್ರೀತಿಯಲಿ
ನೀ ಬಂದೆ ಬರುವೆ ಎನ್ನುವ
ನಿರೀಕ್ಷೆಯ ಜೊತೆಯಲ್ಲಿ
ಸಾಗುತ್ತಿದೆ ನನ್ನೀ ಪಯಣ!
ನೆನಪಿನಂಗಳದ ಈ ಪಯಣದಲಿ
ನನ್ನೊಲವಿನ ಪ್ರೀತಿಯನು
ನಿನಗೆ ಮಾತ್ರವೇ ಮೀಸಲಿರಿಸಿ
ಮುಗ್ಧ ಮೊಗ ಸಾಹಿತಿಯಾಗಿ
ನಾ ಕಾಣದ ಹಾದಿಯಲ್ಲಿ
ಕಾಣಸಿಗದ ನಿನ್ನಯ ಹೆಜ್ಜೆಗುರುತನು
ಅರಸಿ ಬಂದಿರುವೆನು.
ಸಿಗುವೆಯಾ ಗೆಳತಿ
ಪ್ರಿಯಾಂಕ✍
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!