ನೆನಪಿನಂಗಳದ ಪುಟದ
ಅಕ್ಷರಗಳ ನಡುವೆ
ಅವಿತು ಕುಳಿತಿರುವೆಯಲ್ಲ ಗೆಳತಿ....
ನೀನು ಜೊತೆಗಿರದ ಪಯಣದಲಿ
ಮಾತುಗಳು ಮೌನವಾಗಿದೆ..
ನೀ ಹಚ್ಚಿ ಹೋದ ಹಣತೆಯೊಂದು
ನಂದಾದೀಪವಾಗಿ ಬೆಳಗುತ್ತಿದೆ
ನನ್ನೀ ಹೃದಯದಲ್ಲಿ..............
ನಿನ್ನ ನೋಡದ ಪ್ರತಿಕ್ಷಣವು
ಸದ್ದಿಲ್ಲದೇ ಜಾರುತಿಹುದು
ಕಣ್ಣೀರಿನ ಸಾಲುಗಳು..
ತಂಗಾಳಿಯಂತೆ ನೀ ಬಂದು
ನನ್ನವರನ್ನೆಲ್ಲ ಮತ್ತೆ ಜೊತೆಯಾಗಿಸಿ
ಏಕಾಂಗಿಯಾಗಿ ಮರೆಯಾಗಿಹೋದೆಯಲ್ಲೆ.............
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!