ಜಯದ ಬೆನ್ನತ್ತಿ ಹೊರಟು

ಅರಿತೆ ನಾ ಜಗವೆಲ್ಲ ಬರಿ ಒರಟು

ಜಯದ ಪರಿವೀಕ್ಷಣೆಯಲಿ

ಸಾವಿರ ಪರೀಕ್ಷೆಗಳ ಪರಿದಿಯುಂಟು

ಗೆಲುವು ಕನಸಲ್ಲ ಸುಲಭದಲದು ಫಲಿಸಲ್ಲ

ನೋವು-ನಲಿವುಗಳ ಮೀರಿ

ಭಯವೆಲ್ಲ ಗಾಳಿಗೆ ತೂರಿ

ಚಂಚಲ ಚಿತ್ತಕೆ ಚೈತನ್ಯ ಬೀರಿ

ಚಲಿಸಬೇಕು ಗುರಿಯೆಡೆಗೆ ಆತ್ಮಬಲದಿ

ಗೆಲುವು ಕನಸಲ್ಲ ಸುಲಭದಲದು ಫಲಿಸಲ್ಲ

ಎಲ್ಲ ಪ್ರಯತ್ನಗಳ ಫಲವಿದು

ಎಲ್ಲ ಸೋಲುಗಳ ಕೊನೆಯಿದು

ಪರಿಶ್ರಮಕೊಲಿವ ಪಾರಿಜಾತವು

ಭಗೀರತ ಪ್ರಯತ್ನದ ಮಹಾ ಗಂಗೆಯು

ಗೆಲುವು ಕನಸಲ್ಲ ಸುಲಭದಲದು ಫಲಿಸಲ್ಲ

ಸೋಲು ನನದಲ್ಲ

ಸವಾಲಿಗೆ ನಾ ಅಂಜುವುದಿಲ್ಲ

ಗೆಲುವಿನ ಹಠವೆಂದೂ ಕುಗ್ಗುವುದಿಲ್ಲ

ಗೆದ್ದೇ ಗೆಲುವೇ ಒಂದುದಿನ

ಗೆಲಲೇ ಬೇಕು ಪರಿಶ್ರಮ

...✍️✍ನಾಗರಾಜ್ ನಾಯ್ಕ್